ಮಡಿಕೇರಿ, ಡಿ. 12: ಭಾಗಮಂಡಲ ನಾಡು ಸಣ್ಣಪುಲಿಕೋಟು ಗ್ರಾಮದ ಕಾವೇರಿಮನೆ ಕೆ.ಜಿ. ಸೋಮವತಿಯವರು ಲೋಕ ಶಾಂತಿಗಾಗಿ ಅಯ್ಯಂಗೇರಿ ಗ್ರಾಮದ ಚಿನ್ನತ್ತಪ್ಪ ದೇವಾಲಯಕ್ಕೆ ಚಿನ್ನದ ಕೃಷ್ಣನ ಮೂರ್ತಿಯನ್ನು ಅರ್ಪಣೆ ಮಾಡಿದ್ದಾರೆ.
ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ವಿಗ್ರಹಕ್ಕೆ ತೀರ್ಥ ಸ್ನಾನದ ನಂತರ ವಿವಿಧ ಪೂಜಾ ಕಾರ್ಯ ಹಾಗೂ ಹೋಮ ಹವನಾದಿಗಳೊಂದಿಗೆ ಭಕ್ತರಿಗೆ ಅನ್ನದಾನದ ನಂತರ ಶೋಭಾಯಾತ್ರೆಯೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿನ್ನದ ಮೂರ್ತಿಯನ್ನು ಅರ್ಪಿಸಲಾಯಿತು.
ಈ ಸಂದರ್ಭ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಹರೀಶ್ ಭಟ್, ಸಂಚಾಲಕ ಕಾವೇರಿಮನೆ ಭರತ್ ಹಾಗೂ ಇನ್ನಿತರರಿದ್ದರು.