ಚೆಟ್ಟಳ್ಳಿ, ಡಿ. ೧೧: ಚೆಟ್ಟಳ್ಳಿ ಪ್ರೌಢಶಾಲಾ ವಾರ್ಷಿಕೋತ್ಸವ ಸಮಾರಂಭ ತಾ ೨೨ ರಂದು ನಡೆಯಲಿದೆ.

ಪೂರ್ವಾಹ್ನ ೯.೩೦ ಗಂಟೆಗೆ ನಿವೃತ್ತ ಕ್ಯಾಪ್ಟನ್ ಮುಳ್ಳಂಡ ಪಿ. ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಲಿದ್ದು ಶಾಲಾ ವಿದ್ಯಾರ್ಥಿಗಳ ಪಥಸಂಚಲನದ ನಂತರ ಉದ್ಯಮಿ ಜಗದೀಶ್ ರೈ ಕ್ರೀಡಾಜ್ಯೋತಿ ಬೆಳಗಿಸಲಿದ್ದಾರೆ. ಚೆಟ್ಟಳ್ಳಿ ಸ್ಪೋಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ನಿಧಾನ ಸೈಕಲ್ ಸ್ಪರ್ಧೆ, ಮೋಟಾರ್ ಸೈಕಲ್ ಸ್ಪರ್ಧೆ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿದೆ.

ಅಪರಾಹ್ನ ೨.೩೦ ಗಂಟೆಗೆ ಚೆಟ್ಟಳ್ಳಿ ಪೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಪಿ. ಜಯಾನಂದರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಭಾಷಣಕಾರರಾಗಿ ವೀರಾಜಪೇಟೆಯ ಶ್ರೀ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವುಕುಮಾರ್ ನಾಣಯ್ಯ, ಗುತ್ತಿಗೆದಾರರಾದ ವಸಂತ ರೈ ವಿಜೇತರಿಗೆ ಬಹುಮಾನ ವಿತರಣೆ ನೆರವೇರಿಸಲಿದ್ದಾರೆ. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.