ಮಡಿಕೇರಿ ಡಿ. ೧೦ : ಮುದ್ದ ಕಳಲ ಯುವಕ ಸಂಘ ಮತ್ತು ಮೊಗೇರ ಸೇವಾ ಸಮಾಜದ ಸಂಯುಕ್ತಾಶ್ರಯದಲ್ಲಿ ತಾ.೯ ರಂದು ನಡೆಯಬೇಕಿದ್ದ ನಿವೇಶನ ರಹಿತರ ಹೋರಾಟವನ್ನು ಕಾರಣಾಂತರಗಳಿAದ ತಾ.೩೦ಕ್ಕೆ ಮುಂದೂಡಲಾಗಿದೆ ಎಂದು ಮುದ್ದ ಕಳಲ ಯುವಕ ಸಂಘದ ಜಿಲ್ಲಾಧ್ಯಕ್ಷ ಜ್ಯೋತಿ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ನಿವೇಶನ ರಹಿತರು ಕಳೆದ ಹಲವಾರು ವರ್ಷಗಳಿಂದ ಲೈನ್ ಮನೆಗಳಲ್ಲಿ ವಾಸಿಸುತ್ತಿದ್ದು, ವಿವಿಧ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಲೈನ್ ಮನೆಯಲ್ಲಿ ವಾಸವಿರುವ ಮೊಗೇರ ಕುಟುಂಬಗಳಿಗೆ ನಿವೇಶ ನೀಡುವಂತೆ ಒತ್ತಾಯಿಸಿ ಹಲವು ಬಾರಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುದ್ದ ಕಳಲ ಯುವಕ ಸಂಘದ ಮಹಾಸಭೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ತಾ.೩೦ ರಂದು ನಡೆಯಲಿರುವ ಹೋರಾಟದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜ್ಯೋತಿ ಕುಮಾರ್ ಮನವಿ ಮಾಡಿದ್ದಾರೆ.