ಸೋಮವಾರಪೇಟೆ, ಡಿ. ೧೦: ನಿನ್ನೆ ಸಂಜೆ ಸುಂಟಿಕೊಪ್ಪದಿAದ ಕುಂಬೂರು ಕಾಫಿ ಎಸ್ಟೇಟ್‌ಗೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಈ ಪೈಕಿ ಓರ್ವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಿನ್ನೆ ಸಂಜೆ ೫.೩೦ರ ಸುಮಾರಿಗೆ ಸುಂಟಿಕೊಪ್ಪದಿAದ ಕುಂಬೂರಿನ ಬ್ಲೂಮನ್ ಕಾಫಿ ಎಸ್ಟೇಟ್‌ಗೆ ೧೫ ಕೆ.ಜಿ. ಯಷ್ಟು ಗೋ ಮಾಂಸವನ್ನು ಕೊಡಗರಹಳ್ಳಿ ನಿವಾಸಿ ಮೋಹನ್ ಎಂಬವರ ಪುತ್ರ, ಸುಂಟಿಕೊಪ್ಪದ ಆಟೋ ಚಾಲಕ ಜಗದೀಶ್ ಎಂಬಾತ ತನ್ನ ಆಟೋದಲ್ಲಿ ಸಾಗಿಸುತ್ತಿದ್ದ ಸಂದರ್ಭ ಸ್ಥಳೀಯ ಭಜರಂಗದಳ ಕಾರ್ಯಕರ್ತರು ಹಿಡಿದು ಸೋಮವಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದರು.
ಆರೋಪಿ ಆಟೋ ಚಾಲಕನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಕೃತ್ಯದ ಹಿಂದೆ ಇರುವ ಇತರ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಗೋ ಮಾಂಸ ಸಾಗಾಟಗೊಳಿಸುತ್ತಿದ್ದ ಜಗದೀಶ್‌ನನ್ನು ಇಂದು ನ್ಯಾಯಾಲಯದ ಎದುರು ಹಾಜರುಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸುಂಟಿಕೊಪ್ಪದ ಕೆ.ಇ.ಬಿ. ಸಮೀಪದ ನಿವಾಸಿಗಳಾದ ನಯೀಂ ಮತ್ತು ಇಸಾಂ ಎಂಬವರುಗಳು ಗೋ ಮಾಂಸವನ್ನು ಆಟೋ ಚಾಲಕ ಜಗದೀಶ್‌ಗೆ ನೀಡಿದ್ದು, ಇದನ್ನು ಜಗದೀಶ್, ಕುಂಬೂರಿನ ಬ್ಲೂಮನ್ ಕಾಫಿ ತೋಟದ ಲೈನ್‌ಮನೆಯಲ್ಲಿರುವ ಅಸ್ಸಾಂನ ವಜೂರ್ ಆಲಿ ಎಂಬಾತನಿಗೆ ನೀಡಲು ಕೊಂಡೊಯ್ಯುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಲಾಗಿತ್ತು.
ಈ ಬಗ್ಗೆ ಆರೋಪಿಯು ವಿಚಾರಣೆಗೆ ವೇಳೆ ವಿವರ ನೀಡಿದ್ದು, ಘಟನೆಗೆ ಸಂಬAಧಿಸಿದAತೆ ಸುಂಟಿಕೊಪ್ಪದ ನಯೀಂ, ಇಸಾಂ, ಕುಂಬೂರು ಬ್ಲೂಮನ್ ತೋಟದ ಮನೆಯಲ್ಲಿರುವ ಅಸ್ಸಾಮಿನ ವಜೂರ್ ಆಲಿ ಅವರುಗಳ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಇದರಲ್ಲಿ ಜಗದೀಶ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.