ಬೆಂಗಳೂರು, ಡಿ. ೧೧: ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥ ಭಾನುವಾರ ನಗರದ ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಜೊತೆ ಅಭಿಷೇಕ್ ಅವರು ನಿಶ್ಚಿತಾರ್ಥ ನೆರವೇರಿಸಿಕೊಂಡರು.
ಈ ವೇಳೆ ಅಭಿಷೇಕ್ ತಾಯಿ ಸುಮಲತಾ ಅಂಬರೀಶ್, ಅವಿವಾ ಅವರ ತಂದೆ-ತಾಯಿ ಹಾಗೂ ಚಿತ್ರ ರಂಗದ ಗಣ್ಯರು ಪಾಲ್ಗೊಂಡು ಶುಭಹಾರೈಸಿದರು.