ವೀರಾಜಪೇಟೆ, ಡಿ. ೧೦: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ನ. ೨೫ ರಂದು ಕಾವೇರಿ ಶಾಲೆಯ ಸಂಸ್ಥಾಪಕ ದಿ. ಗುಡ್ಡಂಡ ನಂದ ಗಣಪತಿಯವರ ಪುಣ್ಯಸ್ಮರಣೆಯ ದಿನದಂದು ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ದಿ|| ನಂದ ಗಣಪತಿ ಅವರ ಭಾವಚಿತ್ರವನ್ನು ಹೂವಿನಿಂದ ಅಲಂಕರಿಸಲಾಯಿತು. ನಂತರ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವಿನೋದ್ ಪಿ.ಎನ್., ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮೀಳಾ, ಸಹ ಮುಖ್ಯೋಪಾಧ್ಯಾಯಿನಿ ಪಾರ್ವತಿ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಭಾಗ್ಯ ದೀಪವನ್ನು ಬೆಳಗಿದರು. ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮಹಾನ್ ಚೇತನರನ್ನು ಸ್ಮರಿಸಿದರು. ಅಮೃತ ಮತ್ತು ಸರಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ದಿ|| ನಂದ ಗಣಪತಿ ಅವರ ಬಗ್ಗೆ ಅವರ ಒಡನಾಟ ಮತ್ತು ಅವರೊಂದಿಗಿನ ಅನುಭವದ ಬಗ್ಗೆ ಶಾಲೆಯ ಸಂಗೀತ ಶಿಕ್ಷಕ ಶ್ರೀನಿವಾಸ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.