ಸೋಮವಾರಪೇಟೆ, ಡಿ. ೧೧: ಸಮೀಪದ ಯಡೂರು ಗ್ರಾಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಸಭೆ ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷ ಎಚ್.ಬಿ. ರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದು ಯಡೂರು ಪರಿಶಿಷ್ಟ ಜಾತಿ ವಲಯದ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಎಚ್.ಜೆ. ಹರೀಶ್, ಉಪಾಧ್ಯಕ್ಷರಾಗಿ ಎಚ್.ಎನ್. ಧರ್ಮಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಆರ್. ಧನಂಜಯ, ಖಜಾಂಚಿಯಾಗಿ ಎಚ್.ಸಿ. ರಕ್ಷಿತಾ ಆಯ್ಕೆಯಾದರು. ನಿರ್ದೇಶಕರುಗಳಾಗಿ ಗಣೇಶ್, ಪ್ರಕಾಶ್, ಎಚ್.ಸಿ. ರಾಜಶೇಖರ್, ಹರ್ಷಿತ, ಎಚ್.ಸಿ. ನಯನಕುಮಾರ್, ವೈ.ಎಸ್. ನಿಶ್ಚಯ, ಸಂತೋಷ್ಕುಮಾರ್, ಎಚ್.ಬಿ. ಹೂವಯ್ಯ ಹಾಗೂ ಎಚ್.ಈ. ಚಂದ್ರಶೇಖರ್ ನೇಮಕಗೊಂಡರು ಈ ಸಂದರ್ಭ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಈ. ಜಯೇಂದ್ರ ಉಪಸ್ಥಿತರಿದ್ದರು.