ಕುಶಾಲನಗರ, ಡಿ. ೧೧ : ಇಂಧನ ಮತ್ತು ವಿದ್ಯುಚ್ಛಕ್ತಿಯನ್ನು ಅಪವ್ಯಯ ಮಾಡದೇ ಭವಿಷ್ಯತ್ತಿನ ದೃಷ್ಠಿಯಿಂದ ಮಿತವಾಗಿ ಬಳಕೆ ಮಾಡಬೇಕು ಎಂದು ಕರ್ನಾಟಕ ನವೀಕರಿಸ ಬಹುದಾದ ಶಕ್ತಿ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ದ ಉಪ ಪ್ರಧಾನ ವ್ಯವಸ್ಥಾಪಕ ಸಿ.ಟಿ. ಮಂಜುನಾಥ್ ಮನವಿ ಮಾಡಿದರು.

ಕರ್ನಾಟಕ ನವೀಕರಿಸಬಹುದಾದ ಶಕ್ತಿ ಅಭಿವೃದ್ಧಿ ನಿಯಮಿತದ ವತಿಯಿಂದ ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ನವೀಕರಿಸಬಹುದಾದ ಶಕ್ತಿ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನವೀಕರಿಸಬಹುದಾದ ಶಕ್ತಿ ಮತ್ತು ಇಂಧನ ಮೂಲಗಳು ಹಾಗೂ ಭವಿಷ್ಯಕ್ಕಾಗಿ ಅವುಗಳ ಪ್ರಾಮುಖ್ಯತೆ ಕುರಿತು ವಿವರಿಸಿದರು.

ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಭವಿಷ್ಯಕ್ಕಾಗಿ ಅವುಗಳ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದ ಅವರು, ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ಇದೇ ರೀತಿ ಮುಂದುವರೆದಲ್ಲಿ ಭವಿಷ್ಯತ್ತಿನಲ್ಲಿ ಇಂಧನ ಮೂಲಗಳ ಕೊರತೆ ಯುಂಟಾಗಿ ಪರಿತಪಿಸಬೇಕಾಗುತ್ತದೆ ಎಂದರು.

ವಿದ್ಯುಚ್ಛಕ್ತಿಯನ್ನು ಮಿತವ್ಯಯ ಗೊಳಿಸಿ, ವೆಚ್ಚವನ್ನು ಕಡಿತಗೊಳಿಸಿ. ಶಕ್ತಿಯು ಪೋಲಾಗುತ್ತಿರುತ್ತಿರುವುದನ್ನು ನಾವು ತಡೆಗಟ್ಟಬೇಕಿದೆ ಎಂದು ಮಂಜುನಾಥ್ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ. ಸೀನಪ್ಪ ಮಾತನಾಡಿ, ನವೀಕರಿಸಬಹುದಾದ ಶಕ್ತಿ ಇಂಧನ ಸಂರಕ್ಷಣೆಗೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದರೊಂದಿಗೆ ಅವುಗಳ ಸಂರಕ್ಷಣೆಗೆ ಪಣತೊಡ ಬೇಕಾಗಿದೆ ಎಂದರು.

'ಇAಧನ ಸಂರಕ್ಷಣೆ' ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ನಾವು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಇಂಧನ ಮತ್ತು ವಿದ್ಯುಚ್ಛಕ್ತಿಯನ್ನು ಅಪವ್ಯಯ ಮಾಡದೇ ಮುಂದಿನ ಭವಿಷ್ಯಕ್ಕಾಗಿ ಸಂರಕ್ಷಿಸಬೇಕು. ಯಾವುದೇ ಶಕ್ತಿಯನ್ನಾದರೂ ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಬೇಕೇ ವಿನಾಃ ಅನವಶ್ಯಕವಾಗಿ ಪೋಲು ಮಾಡಬಾರದು ಎಂದರು.

ಇದೇ ವೇಳೆ ಶಕ್ತಿ ಇಂಧನ ಸಂರಕ್ಷಣೆ ಕುರಿತು ಟಿ.ಜಿ. ಪ್ರೇಮಕುಮಾರ್, ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಕೆ.ಆರ್.ಇ.ಡಿ.ಎಲ್.ನ ಡಿ.ಜಿ.ಎಂ. ಸಿ.ಟಿ. ಮಂಜುನಾಥ್ ಪ್ರಾತ್ಯಕ್ಷಿಕೆ ಮೂಲಕ ಇಂಧನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಕ್ತಿ ಸಂರಕ್ಷಣೆಗೆ ನಾವು ದಿನನಿತ್ಯ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಯೋಜಕ ಚೂಡಾ ರತ್ನಾಕರ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಎಂ .ಶ್ರೀನಿವಾಸಮೂರ್ತಿ, ಡಾ ಪಿ.ಸಿ. ಶ್ರೀನಿವಾಸ್, ಡಾ ವಿ.ಜಿ. ವಾಣಿ, ಸೆಸ್ಕ್ನ ಇಂಜಿನಿಯರ್ ಲವಕುಮಾರ್, ಅಧಿಕಾರಿ ನೀತಾ ಹಾಗೂ ಉಪನ್ಯಾಸಕರು ಇದ್ದರು.