ಸುAಟಿಕೊಪ್ಪ,ಡಿ.೧೦: ಸರ್ಕಾರಿ ಪ್ರಾಥಮಿಕ, ಪ್ರೌಢ, ಕಾಲೇಜಿನ ಹಳೆ ವಿದ್ಯಾರ್ಥಿಗಳ ಚಡ್ಡಿದೋಸ್ತ್ ಬಳಗ ವತಿಯಿಂದ ತಾ. ೧೧ ರಂದು (ಇಂದು) ಗುಡ್ಡೆಹೊಸೂರು ಐಎನ್‌ಎಸ್ ಅಕಾಡಮಿ ಮೈದಾನದಲ್ಲಿ ನಾಲ್ಕನೇ ವರ್ಷದ ಸೌಹಾರ್ದ ಕ್ರಿಕೆಟ್ ಟೂರ್ನಿ ನಡೆಯಲಿದೆ. ಬೆಳಿಗ್ಗೆ ೯.೩೦ ಗಂಟೆಗೆ ನಡೆಯುವ ಕ್ರಿಕೆಟ್ ಪಂದ್ಯಾಟವನ್ನು ಐಎನ್ ಎಸ್ ಅಕಾಡಮಿಯ ಮಾಲೀಕರಾದ ಐಚೇಟ್ಟಿರ ಪೊನ್ನಪ್ಪ ಸೋಮಯ್ಯ ಉದ್ಘಾಟಿಸಲಿದ್ದಾರೆ.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಚಡ್ಡಿದೋಸ್ತ್ ಬಳಗದ ಅಧ್ಯಕ್ಷ ಎಲ್.ನವೀನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಳಗ ಸ್ಥಾಪಕಾಧ್ಯಕ್ಷ ಮೋಹನ್ ಭಾಗವಹಿಸಲಿದ್ದಾರೆ. ಸಂಜೆ ೩.೩೦ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ನವೀನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕಿ ಕಾವೇರಮ್ಮ, ಸರ್ಕಾರಿ ಜಿ.ಯಂ.ಪಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಾಸುರ ನಂದ ಮತ್ತಿತರರು ಉಪಸ್ಥಿತರಿರುವರು.