ಕೂಡಿಗೆ, ಡಿ. ೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನ ಹೊಸೂರು ಮಾವಿನಹಳ್ಳ ಮಾದಲಾಪುರ, ಬ್ಯಾಡಗೊಟ್ಟ ಸೀಗೆಹೊಸೂರು ಗ್ರಾಮಗಳ ನೂರಾರು ಎಕರೆಗಳಷ್ಟು ಪ್ರದೇಶವು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶವಾಗಿವೆ. ಆದರೆ ಈ ಪ್ರದೇಶದ ನೂರಾರು ರೈತರು ಸಂಪ್ರದಾಯದAತೆ ಮತ್ತು ಹೈನುಗಾರಿಕೆಗೆ ಹಸುಗಳಿಗೆ ಭತ್ತದ ಹುಲ್ಲು ಅನುಕೂಲವಾಗುತ್ತದೆ ಎಂದು ಈ ಅಚ್ಚುಕಟ್ಟು ವ್ಯಾಪ್ತಿಯ ರೈತರು ಸಾವಿರಾರು ರೂ ಹಣವನ್ನು ಖರ್ಚು ಮಾಡಿ ಜಮೀನಿನಲ್ಲಿ ಭತ್ತದ ಬೆಳೆಯನ್ನು ಬೆಳೆಸಿರುತ್ತಾರೆ, ಹವಾಮಾನಕ್ಕೆ ಅನುಗುಣವಾಗಿ ಈ ಬಾರಿ ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಮೂರು ತಿಂಗಳ ಹೈಬ್ರೀಡ್ ತಳಿಯ ಭತ್ತದ ಬೆಳೆಯನ್ನು ಬೆಳೆಯಲಾಗಿದೆ ಈಗಾಗಲೇ ಭತ್ತದ ಬೆಳೆಯು ಕಟಾವಿಗೆ ಬಂದಿದೆ.

ಈ ಬಾರಿ ಬೆಳೆಯು ಉತ್ತಮ ರೀತಿಯಲ್ಲಿ ಬಂದರು ಸಹ ಕಳೆದ ೧೫ ದಿನಗಳಿಂದ ಎರಡೂ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ೬ಕ್ಕೂ ಹೆಚ್ಚು ಮರಿ ಕಾಡಾನೆಗಳು ಹಿಂಡಾಗಿ ಬಂದು ಈ ವ್ಯಾಪ್ತಿಯ೨೦ ಕ್ಕೂ ಹೆಚ್ಚು ರೈತರ ಭತ್ತದ ಬೆಳೆಯನ್ನು ಸಂಪೂರ್ಣವಾಗಿ ತಿಂದು ತುಳಿದು ನಷ್ಟ ಪಡಿಸಿವೆ.

ಅತ್ತೂರು ಮೀಸಲು ಅರಣ್ಯದ ಕಡೆಯಿಂದ ಬರುವ ಕಾಡಾನೆಗಳು ಬೆಂಡೆಬೆಟ್ಟದ ಮೀಸಲು ಅರಣ್ಯ ಮೂಲಕ ಬಂದು ಹಾರಂಗಿ ನದಿಯನ್ನು ದಾಟಿ ನದಿ ಅಂಚಿನ ಭತ್ತದ ಬೆಳೆ ಹಾಳು ಮಾಡಿವೆ, ಇನ್ನೊಂದು ಕಾಡಾನೆಗಳ ಗುಂಪು ಯಡವನಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದು ಹುದುಗೂರು ಗ್ರಾಮ ಹಾರಂಗಿ ನಾಲೆಯ ಸೇತುವೆ ಮೇಲೆ ಬಂದು ಕಕ್ಕೆ ಹೊಳೆಯನ್ನು ದಾಟಿ ಮದಲಾಪುರ ಬ್ಯಾಡಗೊಟ್ಟ ಗ್ರಾಮದಲ್ಲಿ ರೈತರ ಸಂಪೂರ್ಣ ಬೆಳೆಯನ್ನು ಹಾಳುಮಾಡಿವೆ.

ಸತತವಾಗಿ ಐದು ವರ್ಷಗಳಿಂದ ಕಾಡಾನೆಗಳ ಹಾವಳಿಗೆ ಭತ್ತದ ಬೆಳೆಯು ತುತ್ತಾಗುತ್ತಿದೆ. ಪ್ರಭಾಕರ್, ಜಯಲಕ್ಷಿö್ಮ, ಕಂಚನಾ ಶಿವಣ್ಣ ಸೇರಿದಂತೆ ಅನೇಕ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ಅಕ್ಕಿಯನ್ನು ಅಂಗಡಿಯಿAದ ತರುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.

ಸಮರ್ಪಕವಾಗಿ ದೊರಕದ ಪರಿಹಾರ

ಕಳೆದ ೫ ವರ್ಷಗಳಿಂದ ಕಾಡಾನೆಗಳಿಂದ ಬಾರಿ ನಷ್ಟ ಅನುಭವಿಸುತ್ತಿದ್ದು, ೮ ಗ್ರಾಮ ರೈತರಿಗೆ ಸಮರ್ಪಕವಾದ ಪರಿಹಾರ ದೊರಕುತ್ತಿಲ್ಲ. ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ತೆರಳಿದರೂ ಸಹ ಮೇಲ್ಮಟ್ಟದ ಅಧಿಕಾರಿಗಳು ಪರಿಹಾರವನ್ನು ನೀಡುವಲ್ಲಿ ನಿರ್ಲಕ್ಷö್ಯ ಮನೋಭಾವನೆ ತಾಳುತ್ತಿದ್ದಾರೆ ಸಂಪೂರ್ಣವಾಗಿ ನಷ್ಟಗೊಂಡಿದ್ದರೂ ಸಹ ಸರಕಾರದ ಪರಿಹಾರ ಘೋಷಣೆ ಮಾತ್ರ ಇನ್ನೂ ದೊರಕಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಮನವಿ ಪತ್ರವನ್ನು ಸಂಬAಧಿಸಿದ ಇಲಾಖೆಯ ಮೂಲಕ ತಲುಪಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಡಾನೆಗಳಿಂದ ನಷ್ಟಕ್ಕೆ ಒಳಗಾಗಿರುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂಬದು ರೈತರ ಆಗ್ರಹವಾಗಿದೆ. ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಕಚೇರಿಯ ಎದುರು ಪ್ರತಿಭಟನೆ ಯನ್ನು ನಡೆಸಲಾಗುವುದು ಎಂದು ಈ ಭಾಗದ ರೈತರು ತಿಳಿಸಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ