ಮಡಿಕೇರಿ, ಡಿ. ೧೦: ಕಲೆ ಮತ್ತು ಸಂಸ್ಕೃತಿ ಪ್ರತಿಯೊಬ್ಬರಿಗೂ ಅರ್ಥವಾಗುವ ಮಾಧ್ಯಮವಾಗಿದ್ದು, ಆ ನಿಟ್ಟಿನಲ್ಲಿ ಹಿಂದಿನಿAದಲೂ ಉಳಿಸಿಕೊಂಡು ಬಂದಿರುವ ಕಲಾಪ್ರಕಾರಗಳಿಗೆ ಮತ್ತಷ್ಟು ಪ್ರೋತ್ಸಾಹಿಸಬೇಕು ಎಂದು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಎಸ್.ಎಸ್. ನಂದಿನಿ ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜ ಕಲ್ಯಾಣ ಇಲಾಖೆ ಸಹಕಾರದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕುಶಾಲನಗರ ಬಳಿಯ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ‘ಜನಪರ ಉತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡವ ವಾದ್ಯ, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ನಂದಿಧ್ವಜ, ಹುಲಿವೇಷ, ಗಾರುಡಿಗೊಂಬೆ, ಭರತನಾಟ್ಯ, ಸುಗಮ ಸಂಗೀತ ಹೀಗೆ ಹಲವು ಜಾನಪದ ಕಲಾಪ್ರಕಾರಗಳು ಇಂದಿಗೂ ಸಹ ಜನಮನ ಸೆಳೆಯುತ್ತವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಮಾತನಾಡಿ ಕಲೆಗಳನ್ನು ಗೌರವಿಸಬೇಕು. ನಾಡಿನ ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಪ್ರೋತ್ಸಾಹಿಸುವಲ್ಲಿ ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಭಾಗಮಂಡಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಲೋಕೇಶ್ ಮಾತನಾಡಿ ನಾಡಿನಲ್ಲಿ ಹಾಗೂ ಜಿಲ್ಲೆಯಲ್ಲಿ ವಿವಿಧ ಕಲಾಪ್ರಕಾರಗಳು ಇದ್ದು, ಅವುಗಳನ್ನು ಪ್ರೋತ್ಸಾಹಿಸಲಾಗುತ್ತದೆ. ಕಲೆ ಮತ್ತು ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಕಲಾವಿದರಾದ ರವಿಶಂಕರ್ ಅವರು ಮಾತನಾಡಿ ಪ್ರತಿಯೊಬ್ಬರ ಮನಸ್ಸನ್ನು ಬೆಸೆಯುವುದೇ ಜನಪರ ಉತ್ಸವವಾಗಿದ್ದು, ಎಲ್ಲರನ್ನು ಸೆಳೆಯುವ ಶಕ್ತಿ ಕಲಾಪ್ರಕಾರಗಳಿಗೆ ಇದೆ ಎಂದರು.
ಸೋಮವಾರಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಚಂದ್ರಶೇಖರ್ ರೆಡ್ಡಿ, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಈ.ರಾಜು, ವೆಂಕಟೇಶ್, ಉಪನ್ಯಾಸಕರು, ಶಿಕ್ಷಕರು, ಕಲಾವಿದರು ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ವಿಭಾಗದ ಶಿಕ್ಷಕರಾದ ಪುಟ್ಟರಾಜು ಪ್ರಾರ್ಥಿಸಿ, ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ ವಂದಿಸಿದರು.
ಮೆರವಣಿಗೆ: ಕುಶಾಲನಗರದ ಬಸವನಹಳ್ಳಿ ಮುಖ್ಯ ರಸ್ತೆಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದವರೆಗೆ ಜನಪರ ಉತ್ಸವದ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಅಮ್ಮತ್ತಿಯ ಶ್ರೀನಿವಾಸ್ ಅವರ ಕೊಡವ ವಾದ್ಯ ತಂಡ, ಮೊಣ್ಣಂಗೇರಿಯ ಮಾಧವ ಅವರ ತಾಳಮದ್ದಳೆ ತಂಡ, ಅಭಿಷೇಕ್ ತಂಡದಿAದ ಡೊಳ್ಳು ಕುಣಿತ, ಹರಿಪ್ರಸಾದ್ ತಂಡದವರಿAದ ಪೂಜಾಕುಣಿತ, ಮಧು ತಂಡದಿAದ ನಂದಿ ಧ್ವಜ, ಕೆಂಪರಾಜು ತಂಡದವರಿAದ ಹುಲಿವೇಷ, ದೊಡ್ಡಕರಿಯಯ್ಯ ತಂಡದವರಿAದ ಗಾರುಡಿಗೊಂಬೆ, ರಾಮು ಮತ್ತು ತಂಡದವರಿAದ ಚಿಟ್ಟಿಮೇಳ, ಆಂಜನೇಯ ತಂಡದಿAದ ಸೋಮನಕುಣಿತ, ನಿವೇದಿತ ತಂಡದಿAದ ನಗಾರಿ ನೃತ್ಯ, ಪ್ರಶಾಂತ್ ತಂಡದವರಿAದ ಪಠ ಕುಣಿತ, ಸುನಿತ ಮತ್ತು ತಂಡದವರಿAದ ಭರತನಾಟ್ಯ, ರವಿಶಂಕರ್ ಮತ್ತು ವೆಂಕಟೇಶ್ ತಂಡದವರಿAದ ಸುಗಮ ಸಂಗೀತ, ಕಂಸಾಳೆ ತಂಡದವರು, ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಈ.ರಾಜು ತಂಡದವರಿAದ ಗೀತಗಾಯನ ಹೀಗೆ ಹಲವು ತಂಡದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಸಭಾ ಕಾರ್ಯಕ್ರಮದಲ್ಲಿ ಕಂಸಾಳೆ, ಡೊಳ್ಳು ಕುಣಿತ, ಭರತನಾಟ್ಯ, ಸುಗಮ ಸಂಗೀತ, ಕೊಡವ ವಾದ್ಯ, ನಗಾರಿ ಕುಣಿತ, ಹುಲಿವೇಷ, ಪೂಜಾಕುಣಿತ, ಗಾರುಡಿಗೊಂಬೆ, ಭರತನಾಟ್ಯ ಹೀಗೆ ಹಲವು ತಂಡಗಳು ನೃತ್ಯ ಪ್ರದರ್ಶನ ನೀಡಿ ರಂಜಿಸಿದವು.