ಗೋಣಿಕೊಪ್ಪ ವರದಿ, ಡಿ. ೧೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿರುವ ಜಿಲ್ಲಾಮಟ್ಟದ ಸೆವೆನ್ ಸೈಡ್ ಹಾಕಿ ಟೂರ್ನಿಯ ಮೊದಲ ದಿನ ಪೊನ್ನಪ್ಪಸಂತೆ, ಬಿ. ಶೆಟ್ಟಿಗೇರಿ, ಹುದಿಕೇರಿ, ಕಾಕೋಟುಪರಂಬು, ಕದನೂರು, ಶ್ರೀಮಂಗಲ, ಮೂರ್ನಾಡ್, ನಿಟ್ಟೂರು, ಕಾಕೋಟುಪರಂಬು (ಬ್ಲೂ), ಕಿರುಗೂರು (ಬಿ), ನಾಲ್ಕೇರಿ ಹಾಗೂ ಕಕ್ಕಬ್ಬೆ ಮಲ್ಮ (ಬಿ) ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು.
ಪೊನ್ನಪ್ಪಸಂತೆ ತಂಡವು ಕಾನೂರು ತಂಡವನ್ನು ೪-೨ ಗೋಲುಗಳಿಂದ ಮಣಿಸಿತು. ಪೊನ್ನಪ್ಪಸಂತೆ ತಂಡದ ಯಶ್ವಿನ್ ೨ ಮತ್ತು ವಿರಾಟ್, ಸೋಮಣ್ಣ, ಕಾನೂರು ಆಟಗಾರ ಚೆಂಗಪ್ಪ ೨ ಗೋಲು ಹೊಡೆದರು. ಬಿ. ಶೆಟ್ಟಿಗೇರಿ ತಂಡಕ್ಕೆ ಬಾಳೆಲೆ ವಿರುದ್ಧ ೧-೦ ಗೋಲುಗಳ ಜಯ ದೊರೆಯಿತು. ಪೂವಯ್ಯ ಗೋಲು ಹೊಡೆದರು. ಹುದಿಕೇರಿ ತಂಡವು ನಾಂಗಾಲ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಹುದಿಕೇರಿ ತಂಡದ ಅಯ್ಯಪ್ಪ ೩ ಗೋಲು ಬಾರಿಸಿದರು.
ಕಾಕೋಟುಪರಂಬು ತಂಡಕ್ಕೆ ಹಾತೂರು (ಗ್ರೀನ್) ವಿರುದ್ದ ೪-೦ ಗೋಲುಗಳ ಜಯ ಲಭಿಸಿತು. ಕೆ. ಸಿ. ಬೋಪಣ್ಣ ೧, ಆರ್ಯನ್ ೨, ಧನುಷ್ ೧ ಗೋಲು ಹೊಡೆದರು. ಕದನೂರು ತಂಡವು ಪೊನ್ನಂಪೇಟೆ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿತು. ಕದನೂರು ತಂಡದ ನಾಚಪ್ಪ ೧, ಗಣಪತಿ ೨ ಗೋಲುಗಳ ಸಾಧನೆ ಮಾಡಿದರು.
ಶ್ರೀಮಂಗಲ ತಂಡಕ್ಕೆ ಕಿರುಗೂರು ತಂಡದ ವಿರುದ್ಧ ಟೈಬ್ರೇಕರ್ನಲ್ಲಿ ೭-೬ ಗೋಲುಗಳ ಜಯ ದೊರೆಯಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ೨-೨ ಗೋಲುಗಳಿಂದ ಟೈ ಸಾಧನೆ ಮಾಡಿದವು. ನಂತರ ನಡೆದ ಟೈಬ್ರೇಕರ್ನಲ್ಲಿ ಶ್ರೀಮಂಗಲ ಜಯಿಸಿತು. ಶ್ರೀಮಂಗಲ ತಂಡದ ಎ. ಪಿ. ಚೆಂಗಪ್ಪ, ಎ. ಪಿ. ರಿಚಿ ಮಾದಪ್ಪ ತಲಾ ೧, ಮುರುಳಿ ಕುಶಾಲಪ್ಪ, ಕಿರುಗೂರು ತಂಡದ ಅಖಿಲ್ ಮುತ್ತಪ್ಪ ೧, ತಿಮ್ಮಯ್ಯ ೨, ಕುಶಾಲಪ್ಪ ೨ ಗೋಲು ಹೊಡೆದರು. ಮೂರ್ನಾಡ್ ತಂಡಕ್ಕೆ ಟಿ. ಶೆಟ್ಟಿಗೇರಿ ವಿರುದ್ಧ ೫-೦ ಗೋಲುಗಳ ಜಯ ದೊರೆಯಿತು. ಮೂರ್ನಾಡ್ ಆಟಗಾರ ವಿಪುಲ್, ವಿನು ಸೋಮಯ್ಯ, ಬೋಪಣ್ಣ, ಪ್ರಜ್ವಲ್, ಶಮಂತ್ ತಲಾ ೧ ಗೋಲು ಬಾರಿಸಿದರು.
ನಿಟ್ಟೂರು ತಂಡವು ಬಿಟ್ಟಂಗಾಲ ವಿರುದ್ಧ ೩-೧ ಗೋಲುಗಳಿಂದ ಜಯಿಸಿತು. ನಿಟ್ಟೂರು ತಂಡದ ಅಯ್ಯಪ್ಪ ೩, ಬಿಟ್ಟಂಗಾಲ ಆಟಗಾರ ಆದರ್ಶ್ ೧ ಗೋಲು ಬಾರಿಸಿದರು. ಕಾಕೋಟುಪರಂಬು (ಬ್ಲೂ) ತಂಡಕ್ಕೆ ಬಲ್ಯಮುಂಡೂರು ವಿರುದ್ಧ ೪-೨ ಗೋಲುಗಳ ಜಯ ದೊರೆಯಿತು. ಕಾಕೋಟುಪರಂಬು ಆಟಗಾರ ವಿಶಾಲ್ ೨, ಹರ್ಷಿತ್, ಮಧು, ಬಲ್ಯಮುಂಡೂರು ಆಟಗಾರ ಪಿ. ಎ. ಸೋಮಣ್ಣ, ಸಿ. ಯು. ಚಿಣ್ಣಪ್ಪ ತಲಾ ೧ ಗೋಲು ಹೊಡೆದರು.
ಕಿರುಗೂರು (ಬಿ) ತಂಡವು ಹಾತೂರು (ರೆಡ್) ವಿರುದ್ದ ೨-೧ ಗೋಲುಗಳಿಂದ ಜಯಿಸಿತು. ಕಿರುಗೂರು ಆಟಗಾರ ಸೋಮಣ್ಣ ೨, ಹಾತೂರು ತಂಡದ ನಾಚಪ್ಪ ೧ ಗೋಲು ಹೊಡೆದರು. ನಾಲ್ಕೇರಿ ತಂಡವು ಬಿಳುಗುಂದವನ್ನು ೩-೦ ಗೋಲುಗಳಿಂದ ಸೋಲಿಸಿತು. ತಿಮ್ಮಣ್ಣ ೨, ಪೂಣಚ್ಚ ೧ ಗೋಲು ಬಾರಿಸಿದರು. ಕಕ್ಕಬ್ಬೆ ಮಲ್ಮ (ಬಿ) ತಂಡವು ಚೆಟ್ಟಳ್ಳಿ ತಂಡವನ್ನು ೭-೦ ಗೋಲುಗಳಿಂದ ಮಣಿಸಿತು. ಮಲ್ಮ ತಂಡದ ಯಶ್ವಂತ್ ೪, ಮುತ್ತಣ್ಣ ೨, ನಂಜಪ್ಪ ೧ ಗೋಲು ಹೊಡೆದರು.
ಉದ್ಘಾಟನೆ : ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್ ಟೂರ್ನಿ ಉದ್ಘಾಟಿಸಿ ಮಾತನಾಡಿ, ಆರೋಗ್ಯಪೂರ್ಣ ದೇಹಕ್ಕೆ ಚಟುವಟಿಕೆ ಮುಖ್ಯ. ರಾಷ್ಟಿçÃಯ ಕ್ರೀಡೆ ಹಾಕಿಗೆ ನೀಡುತ್ತಿರುವ ಮಹತ್ವ ಯುವ ಸಮೂಹದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತಿದೆ ಎಂದರು.
ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಅಸೋಸಿಯೇಷನ್ ಅಧ್ಯಕ್ಷ ಚಿರಿಯಪಂಡ ಪವನ್ ಬಿದ್ದಪ್ಪ ಮಾತನಾಡಿ, ಗ್ರಾಮ ಮಟ್ಟದ ಕೆಲವೊಂದು ತಂಡಕ್ಕೆ ೧೧ ಜನರ ತಂಡ ರಚಿಸಲು ಆಟಗಾರರ ಕೊರತೆ ಇದೆ. ಇದರಿಂದಾಗಿ ೭ ಆಟಗಾರರ ಟೂರ್ನಿ ಆಯೋಜಿಸಲಾಗಿದೆ. ಸಾಕಷ್ಟು ಪ್ರತಿಭೆಗಳು ಮೊದಲ ಬಾರಿಗೆ ಟರ್ಫ್ ಮೈದಾನದ ಅನುಭವ ಪಡೆಯುವಂತಾಗಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಮಚ್ಚಮಾಡ ಕಂದಾ ಭೀಮಯ್ಯ ಉದ್ಘಾಟಿಸಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ಅಂತಾರಾಷ್ಟಿçÃಯ ಮಾಜಿ ಆಟಗಾರ ಕೂತಂಡ ಕೆ. ಪೂಣಚ್ಚ, ಮಾಜಿ ಆಟಗಾರ್ತಿ ಕಂಬೀರAಡ ನವ್ಯ ಪೊನ್ನಮ್ಮ, ಮಾಜಿ ತೀರ್ಪುಗಾರ ಅಚ್ಚಕಾಳೇರ ಪಳಂಗಪ್ಪ ಇದ್ದರು. ಥ್ರೋಬಾಲ್ನಲ್ಲಿ ರಾಷ್ಟçವನ್ನು ಪ್ರತಿನಿಧಿಸಿದ ಪಿ. ಎಂ. ನವೀನ್ ಅವರನ್ನು ಸನ್ಮಾನಿಸಲಾಯಿತು. ಎಎನ್ಎಫ್ (ಆ್ಯಂಟಿ ನಕ್ಸಲ್ ಫೋರ್ಸ್) ಐ. ಜಿ. ವಿಪುಲ್ಕುಮಾರ್ ಮೈದಾನಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಿದರು.