ಸುಂಟಿಕೊಪ್ಪ, ಡಿ. ೧೦: ಇಲ್ಲಿನ ಲಯನ್ಸ್ ಸಂಸ್ಥೆಯ ವತಿಯಿಂದ ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿಗೆ ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಸಲುವಾಗಿ ಎರಡು ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಲಯನ್ ಎಂ.ಎ. ವಸಂತ ಹಾಗೂ ಡಾ. ಯಶೋದರ್ ಪೂಜಾರಿ ನೆರವೇರಿಸಿದರು. ನಂತರ ಮಾತನಾಡಿದ ಎಂ.ಎ. ವಸಂತ ಅವರು ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಕಲಿಕೆಯಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದುವುದರೊAದಿಗೆ ತಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಲಯನ್ ಕೆ.ಡಿ. ರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಬಳಕೆ ಕಡಿಮೆ ಮಾಡಿ ಕಂಪ್ಯೂಟರ್ ಜ್ಞಾನ ಪಡೆದು ನಿಜವಾದ ಸಾಕ್ಷರರೆನಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮುಖ್ಯವಾಹಿನಿಗೆ ಬರಲು ಕಂಪ್ಯೂಟರ್ ಜ್ಞಾನ ಅಗತ್ಯ ಎಂದರು. ಹಿರಿಯರಾದ ಲಯನ್ಸ್ ಎಸ್.ಜಿ. ಶ್ರೀನಿವಾಸ್, ಲಯನ್ಸ್ ಶಶಿಕಾಂತ್, ಸಿ.ಟಿ. ಪೊನ್ನಪ್ಪ, ಲಯನ್ಸ್ ಅಧ್ಯಕ್ಷ ದಾಸಂಡ ಚಮನ್ ಚೆಟ್ಟಿಯಪ್ಪ, ಕಾರ್ಯದರ್ಶಿ ಶಶಾಂಕ್ ಶ್ರೀನಿವಾಸ್, ಪಿ.ಜಿ. ಪೆಮ್ಮಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೈ.ಯಂ. ಕರುಂಬಯ್ಯ, ಖಜಾಂಚಿ ರಮೇಶ್ ಪಿಳ್ಳೆ, ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ಕೆ.ಸಿ. ಕವಿತ, ಉಪನ್ಯಾಸಕರಾದ ಸುಚಿತ್ರ, ಅನುಷಾ, ಕಲಾವತಿ, ಸರಳ, ಸುನೀತ, ಸಂಧ್ಯಾ, ಕೋಕಿಲಾ, ಕವಿತಾ ಭಕ್ತ್, ಸಿಬ್ಬಂದಿ ಕನಕ ವಿದ್ಯಾರ್ಥಿಗಳು ಹಾಜರಿದ್ದರು.