ಕಣಿವೆ, ಡಿ. ೧೦: ಸಮೀಪದ ಗುಡ್ಡೆಹೊಸೂರು ಗ್ರಾಮದ ಐಎನ್‌ಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶಟಲ್ ಬ್ಯಾಡ್ಮಿಂಡನ್ ಲೀಗ್ ಪಂದ್ಯಾವಳಿಗೆ ಕ್ರೀಡಾಂಗಣದ ಮಾಲೀಕ ಐಚೆಟ್ಟಿರ ಸೋಮಯ್ಯ ಚಾಲನೆ ನೀಡಿದರು.

ಇದೇ ಸಂದರ್ಭ ಉದ್ಯಮಿಗಳಾದ ಮಹೇಶ್, ಪದ್ಮ ಮಹೇಶ್, ಐಚೆಟ್ಟಿರ ಪೊನ್ನಪ್ಪ ಪಾಲ್ಗೊಂಡಿದ್ದರು. ಪಂದ್ಯಾವಳಿಯಲ್ಲಿ ೮೪ ಆಟಗಾರರಿದ್ದು ಎರಡು ದಿನಗಳ ಕಾಲ ಪಂದ್ಯಾಟ ನಡೆಯಲಿದೆ.