ವೀರಾಜಪೇಟೆ, ಡಿ. ೧೦: ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು ಹಾಕಿ ಜೊತೆಗೆ ಇತರ ಕ್ರೀಡೆಯಲ್ಲಿಯೂ ಕ್ರೀಡಾ ಪ್ರತಿಭೆಗಳು ಅಂತರರಾಷ್ಟಿçÃಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಪ್ರತಿಭೆಗಳಿಗೆ ಅವಕಾಶ ನೀಡಲು ಈ ಒಳಾಂಗಣ ಕ್ರೀಡಾಂಗಣ ಅನೂಕೂಲವಾಗಲಿದೆ ಎಂದು ವೀರಾಜಪೇಟೆ ಶಾಸಕ ಬೋಪಯ್ಯ ಹೇಳಿದರು.
ವೀರಾಜಪೇಟೆ ಜೂನಿಯರ್ ಕಾಲೇಜು ಬಳಿ ಸರಕಾರದ ವತಿಯಿಂದ ನೂತನವಾಗಿ ನಿರ್ಮಿಸಿರುವ ೬ ಕೋಟಿ ರೂಗಳ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ೨೦೧೨ ರಲ್ಲಿ ನಮ್ಮ ಸರಕಾರ ಒಳಾಂಗಣ ಕ್ರೀಡಾಂಗಣಕ್ಕೆ ನಾಲ್ಕು ಕೋಟಿ, ಪೊನ್ನಂಪೇಟೆ ಟರ್ಫ್ ಮೈದಾನಕ್ಕೆ ೫ ಕೋಟಿ ಅನುದಾನವನ್ನು ಬಜೆಟ್ನಲ್ಲಿ ನೀಡಿತ್ತು. ತಾಂತ್ರಿಕ ತೊಂದರೆಗಳಿAದ ಇದೀಗ ಕ್ರೀಡಾಂಗಣ ಕೆಲಸ ತಡವಾಯಿತು. ಕ್ರಿಡಾಂಗಣದ ಬಹುತೇಕ ಪೂರ್ಣ ವಾಗಿದೆ, ತಡೆಗೋಡೆ ನೆಲ ಹಾಸುಗಳಿಗೆ ಮಳೆ ಹಾನಿ ಪರಿಹಾರದಲ್ಲಿ ೯೧ ಲಕ್ಷ ರೂ ನೀಡಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಇದ್ದು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಬೇಕು ಹಾಗೂ ಇತರಿಗೆ ಸೂಕ್ತ ರೀತಿಯ ದರ ನಿಗದಿ ಮಾಡಬೇಕು ಎಂದರು. ಇದಕ್ಕಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶೀಘ್ರವಾಗಿ ಒಂದು ಸಮಿತಿಯನ್ನು ರಚಿಸಿ ಇಲ್ಲಿನ ನಿರ್ವಹಣೆಗೆ ಕ್ರಮ ವಹಿಸಲಾಗುತ್ತದೆ. ಅಲ್ಲದೆ ಈ ಸಮಿತಿಯಲ್ಲಿ ಓರ್ವ ಕ್ರೀಡಾ ಪ್ರತಿನಿಧಿಯೂ ಇರಬೇಕು ಎಂಬ ಆಶಯ ನಮ್ಮದಾಗಿದೆ ಎಂದು ಹೇಳಿದರು. ಪೊನ್ನಂಪೇಟೆ ಟರ್ಫ್ ಹಾಕಿ ಮೈದಾನಕ್ಕೆ ಪಾಡಂಡ ಕುಟ್ಟಪ್ಪ ಹೆಸರು ಇಡಲು ಅನುಮೋದನೆ ದೊರೆತಿದ್ದು, ಅದರಂತೆ ಈ ಕ್ರೀಡಾಂಗಣಕ್ಕೂ ಬೇರೆ ಹೆಸರಿಡುವ ಬಗ್ಗೆ ಚರ್ಚೆ ನಡೆಸಿ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ವೀರಾಜಪೇಟೆ ಫೀಲ್ಡ್ ಮಾರ್ಷಲ್ (ಮೊದಲ ಪುಟದಿಂದ) ಕಾರ್ಯಪ್ಪ ಹಾಕಿ ಸಂಸ್ಥೆಯ ಅಧ್ಯಕ್ಷ ಡಾ ಮುಕ್ಕಾಟೀರ ಕಾರ್ಯಪ್ಪ ಮಾತನಾಡಿ, ಈ ಕ್ರೀಡಾಂಗಣವನ್ನು ನಾವು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಬೇಸಿಗೆಯಲ್ಲಿ ನಮ್ಮ ಸಂಸ್ಥೆಯ ಮೂಲಕ ಹಾಕಿ ತರಬೇತಿ ನೀಡುತ್ತಿದ್ದೇವೆ. ಶಾಲಾ ಮಕ್ಕಳಿಗೆ ಇಲ್ಲಿ ಉತ್ತಮ ಅವಕಾಶವಿದ್ದು ತಮ್ಮ ಕ್ರೀಡಾ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ವೀರಾಜಪೇಟೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಾತಂಡ ಜ್ಯೋತಿ, ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯ, ಪುರಸಭೆÀ ಮುಖ್ಯಧಿಕಾರಿ ಚಂದ್ರಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋಧ, ಪುರಸಭೆ ಸದಸ್ಯೆ ಆಶಾ ಸುಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.