ಮಡಿಕೇರಿ, ಡಿ. ೧೦: ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ೨೦೨೨- ೨೩ ನೇ ಸಾಲಿನ ರಾಜ್ಯಮಟ್ಟದ ಯುವಜನೋತ್ಸವ ತಾ. ೧೭ ಮತ್ತು ೧೮ರಂದು ಚಿಕ್ಕಮಂಗಳೂರಿನಲ್ಲಿ ನಡೆಯಲಿದೆ.
ಪೊನ್ನಂಪೇಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಎಲ್ಲಾ ವಿಜೇತರು ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳುವಂತೆ ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ. ಪಿ. ಪಿ ಸುಕುಮಾರ ತಿಳಿಸಿದ್ದಾರೆ. ಸ್ಪರ್ಧಿಗಳು ತೆರಳುವ ಸಂದರ್ಭ ಲಘು ಹಾಸಿಗೆ ಹೊದಿಕೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ತಾ. ೧೬ ರ ಸಂಜೆ ೫ ಗಂಟೆಯಿAದ ತಾ. ೧೭ರ ಬೆಳಿಗ್ಗೆ ೯ ಗಂಟೆಯವರೆಗೆ ಚಿಕ್ಕಮಂಗಳೂರಿನ ಬಸ್ನಿಲ್ದಾಣ ಪಕ್ಕದಲ್ಲಿರುವ ಕುವೆಂಪು ಕಲಾ ಮಂದಿರದಲ್ಲಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ೯೪೮೧೨೧೩೯೨೦ ಸಂಪರ್ಕಿಸಬಹುದಾಗಿದೆ.