ಮಡಿಕೇರಿ, ಡಿ. ೯: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ವಾರ್ಷಿಕ ಕಾರ್ಯಕ್ರಮದನ್ವಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದಲ್ಲಿ ಸಹಕಾರದ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯಮಟ್ಟದ ಚರ್ಚಾಸ್ಪರ್ಧೆಗಾಗಿ ಕೊಡಗು ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳು (ವಿಷಯದ ಪರವಾಗಿ ಒಬ್ಬರು ಮತ್ತು ವಿಷಯದ ವಿರುದ್ಧವಾಗಿ ಒಬ್ಬರು) ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಯ್ಕೆ ಮಾಡಿ ಕಳುಹಿಸಿಕೊಡಬೇಕಾಗಿದೆ. ಜಿಲ್ಲಾಮಟ್ಟದಲ್ಲಿ ವಿಜೇತರಾದವರಿಗೆ ಮೂರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಾತ್ರ ಪ್ರಯಾಣ ವೆಚ್ಚ ನೀಡಲಾಗುವುದು. ಮೊದಲ ಮೂರು ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಹಾಗೂ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಜಿಲ್ಲೆಯಿಂದ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆ ಮಾಡಲು ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯನ್ನು ತಾ. ೧೬ ರ ಶುಕ್ರವಾರದಂದು ಪೂರ್ವಾಹ್ನ ೧೧ ಗಂಟೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ, ಪೆನ್‌ಶನ್ ಲೇನ್, ಮಡಿಕೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾಸಂಸ್ಥೆಯಿAದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿಕೊಡಬೇಕಿದೆ.
ಸಂಸ್ಥೆಯಿAದ ಭಾಗವಹಿಸುವ ಅಭ್ಯರ್ಥಿಗಳಲ್ಲಿ ಒಬ್ಬರು ವಿಷಯದ ಪರವಾಗಿ, ಒಬ್ಬರು ವಿಷಯದ ವಿರುದ್ಧವಾಗಿ ಮಾತನಾಡಬೇಕು. ಸ್ಪರ್ಧಾಳುಗಳು ಆಂಗ್ಲ ಅಥವಾ ಕನ್ನಡ ಭಾಷೆಯಲ್ಲಿ ಮಾತ್ರ ಮಾತನಾಡಲು ಅವಕಾಶವಿದೆ. ಚರ್ಚಾ ಸ್ಪರ್ಧೆಯನ್ನು ಅದರ ನಿಯಮಗಳಿಗನುಸಾರವಾಗಿ ನಡೆಸಲಾಗುವುದು. ಚರ್ಚಾ ಸ್ಪರ್ಧೆಗೆ ವಿಷಯ ‘ಸಮೃದ್ಧ ಭಾರತ ನಿರ್ಮಾಣದಲ್ಲಿ ಸಹಕಾರ ಚಳುವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲದು’ ‘ಔಟಿಟಥಿ ಅo-oಠಿeಡಿಚಿಣive movemeಟಿಣ ಛಿಚಿಟಿ ಠಿಟಚಿಥಿ mಚಿರಿoಡಿ ಡಿoಟe iಟಿ ಣhe ಆeveಟoಠಿmeಟಿಣ oಜಿ ಣhe ಠಿಡಿosಠಿeಡಿous Iಟಿಜiಚಿ’.