ವೀರಾಜಪೇಟೆ, ಡಿ. ೧೦: ಗ್ರಾಮೀಣ ಮಟ್ಟದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಡುವ ಅಗತ್ಯತೆ ಇದ್ದು ಈ ಮೂಲಕ ಅನೇಕ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಹೊರ ತರಬಹುದಾಗಿದೆ ಎಂದು ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಪ್ರಾಂಶುಪಾಲೆ ಮಮತಾ ಹೇಳಿದರು.
ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವೀರಾಜಪೇಟೆ ತಾಲೂಕು ಪಂಚಾಯಿತಿ. ಆರ್ಜಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಕ್ರೀಡೆಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಕ್ರೀಡೆಯಿಂದ ಮಾನಸಿಕ ದೃಢತೆ, ಆರೋಗ್ಯ ಸ್ವಾಸ್ಥತೆಯೊಂದಿಗೆ ಉತ್ತಮವಾದ ಬದುಕಿನ ಭವಿಷ್ಯವನ್ನು ರೂಪಿಸಿಕೊಳ್ಳ ಬಹುದು. ಕೊಡಗು ಕ್ರೀಡಾ ಕ್ಷೇತ್ರದಲ್ಲಿ ತನ್ನದೆ ಅದ ಛಾಪನ್ನು ಮೂಡಿಸಿ ಕ್ರೀಡಾ ಜಿಲ್ಲೆ ಎಂದು ಕೀರ್ತಿ ಗಳಿಸಿದೆ. ಜಿಲ್ಲೆ ರಾಷ್ಟಿçÃಯ, ಅಂತರರಾಷ್ಟಿçÃಯ ಆಟಗಾರರನ್ನು, ಅನೇಕ ಸೇನಾನಿಗಳನ್ನು ದೇಶಕ್ಕೆ ನೀಡಿದೆೆ. ಪುಟ್ಟ ಜಿಲ್ಲೆಯಾದರೂ, ದೇಶ ವಿದೇಶದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಕಾರ್ಯದರ್ಶಿ ಆರ್ ರಾಜನ್, ಗ್ರಾಮಾಭಿವೃದ್ಧಿ ಅಧಿಕಾರಿ ಮಣಿ, ಗ್ರಾ.ಪಂ. ಉಪಾಧ್ಯಕ್ಷ ಉಪೇಂದ್ರ, ಸದಸ್ಯರಾದ ಕೆ.ಟಿ. ಬಶೀರ್ ಉಪಸ್ಥಿತರಿದ್ದು ಸಭೆಯನ್ನು ಉದೇಶಿಸಿ ಮಾತನಾಡಿದರು. ಆರ್ಜಿ ಗ್ರಾ.ಪಂ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪೊನ್ನಂಪೇಟೆಯ ಸಾಯಿ ಕ್ರೀಡಾ ಶಾಲೆಯಲ್ಲಿ ಓದುತ್ತಿರುವ ೮ ನೇ ತರಗತಿ ವಿದ್ಯಾರ್ಥಿನಿ ಕೀತಿಯಂಡ ಪೂರ್ವಿಕ ಪೂವಮ್ಮ ಹಾಕಿ ಆಟದಲ್ಲಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುವ ಹಿನೆÀ್ನಲೆಯಲ್ಲಿ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.