ಮಡಿಕೇರಿ, ಡಿ. ೧೦: ಐತಿಹಾಸಿಕ ಹಿನ್ನೆಲೆಯಿರುವ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಒಳಾಂಗಣದೊಳಗಡೆ ಪಾದರಕ್ಷೆಯನ್ನು ಕೂಡ ಬಿಡುವಂತಿಲ್ಲ., ವಾಹನಗಳಿಗಂತೂ ಪ್ರವೇಶವೇ ಇಲ್ಲ., ಇಂತಹ ಪವಿತ್ರ ಕ್ಷೇತ್ರದೊಳಗಡೆ ಅಲ್ಲಿಯೇ ಕೆಲಸ ಮಾಡಿಕೊಂಡಿರುವ ಯುವಕರು ದೇವಾಲಯದ ಆವರಣ ಗೋಡೆಯನ್ನೇ ಕೆಡವಿ ಕಾರನ್ನು ನುಗ್ಗಿಸಿರುವ ಘಟನೆ ನಡೆದಿದೆ..!
ಮಡಿಕೇರಿ ನಗರದ ಪವಿತ್ರ ಕ್ಷೇತ್ರವಾದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿಗೆ ಬರುವ ಭಕ್ತಾದಿಗಳ ವಾಹನ ನಿಲುಗಡೆಗೆ ಹೊರಾವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೊಂದು ಭಾಗದಲ್ಲಿ ಗೋಶಾಲೆ ಇದ್ದು ಅಲ್ಲಿ ಗೋವುಗಳನ್ನು ಸಾಕಲಾಗುತ್ತಿದೆ. ಗೋವುಗಳನ್ನು ಒಳಕ್ಕೆ ಕರೆತರುವ ನಿಟ್ಟಿನಲ್ಲಿ ಒಂದು ಗೇಟ್ ನಿರ್ಮಿಸಲಾಗಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ದೇವಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕರೀರ್ವರು ದೇಗುಲದ
(ಮೊದಲ ಪುಟದಿಂದ) ಆವರಣ ಗೋಡೆಯನ್ನು ಒಡೆದು ಮಾರುತಿ ಎಸ್ಟೀಮ್ ಕಾರನ್ನು ದೇವಾಲಯದ ಆವರಣದೊಳ ಗಡೆಯೇ ನಿಲ್ಲಿಸಿದ್ದಾರೆ.
ಅಧಿಕಾರಿಯಿಂದ ತರಾಟೆ
ದೇಗುಲದ ಆವರಣದ ಗೋಡೆಯನ್ನು ಒಡೆದು ಕಾರನ್ನು ಒಳ ನುಗ್ಗಿಸಿದ ದೇಗುಲದಲ್ಲಿ ಕೆಲಸ ನಿರ್ವಹಿಸುತ್ತಿರುವ ಪುನಿತ್ ಹಾಗೂ ಭರತ್ ಎಂಬವರುಗಳ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿರುವಂತೆ ದೇವಾಲಯದ ಪ್ರಬಾರ ಕಾರ್ಯ ನಿರ್ವಹಣಾಧಿಕಾರಿ ದೇವರಾಜು ಅವರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಜೆ ವೇಳೆಗೆ ದೇವಾಲಯಕ್ಕೆ ಆಗಮಿಸಿದ ಅವರು; ಒಡೆದು ಹಾಕಲಾಗಿರುವ ಆವರಣ ಗೋಡೆಯನ್ನು ಪರಿಶೀಲಿಸಿ ಯುವಕರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು.
ಭಕ್ತರ ಅಸಮಾಧಾನ
ದೇವಾಲಯದ ಆವರಣ ಗೋಡೆಯನ್ನು ಒಡೆದು ಕಾರನ್ನು ಆವರಣದೊಳಗಡೆ ನಿಲ್ಲಿಸಿದ ಯುವಕರ ದುರ್ವರ್ತನೆ ಬಗ್ಗೆ ಭಕ್ತಾದಿಗಳಿಂದ ಅಸಮಾಧಾನ ವ್ಯಕ್ತಗೊಂಡಿದೆ. ಪವಿತ್ರ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕರು ಮದು ಮಾಂಸ ಸೇವನೆ ಮಾಡುತ್ತಿರುವದಾಗಿಯೂ ಆರೋಪಗಳು ಕೇಳಿ ಬಂದಿದೆ.
-ಸAತೋಷ್