ಮಡಿಕೇರಿ, ಡಿ. ೮: ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ವಕೀಲ ಎಂ.ಎಸ್. ಬಿದ್ದಪ್ಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಕೀಲ ವೃತಿ ತುಂಬಾ ಪವಿತ್ರವಾದದ್ದು, ಕಷ್ಟ ಪಟ್ಟು ಶೃದ್ದೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ನ್ಯಾಯಾಂಗದ ಬಗ್ಗೆ ಮತ್ತು ಇತರ ವಕೀಲರ ಬಗ್ಗೆ ಗೌರವ ಭಾವನೆ ಹೊಂದಿ, ವಕೀಲ ವೃತಿಯ ಘನತೆ, ಗೌರವ ಕಾಪಾಡಕೊಳ್ಳಬೇಕು ಮತ್ತು ಈ ಮೂಲಕ ನೊಂದ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಕಿರಿಯ ವಕೀಲರಿಗೆ ಕಿವಿಮಾತು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಡಿ. ದಯಾನಂದ ಮಾತನಾಡಿ ಭಾರತದ ಮೊದಲ ರಾಷ್ಟçಪತಿಗಳಾದ ಬಾಬು ರಾಜೇಂದ್ರ ಪ್ರಸಾದ್ ರವರು ಸ್ವತ ವಕೀಲರಾಗಿದ್ದು ಅವರ ಹುಟ್ಟುಹಬ್ಬವನ್ನು ಭಾರತದಾದ್ಯoತ ವಕೀಲರ ದಿನಾಚರಣೆಯನ್ನಾಗಿ ಆಚರಿಸುತಿದ್ದೇವೆ, ಅವರ ತತ್ವದಾರ್ಶ, ನಮಗೆಲ್ಲರಿಗೂ ಪ್ರೇರಣೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆಯ ಸವಿನೆನಪಿಗಾಗಿ ಹೊರತರಲಾದ ಸ್ಮರಣಿಕೆಯನ್ನು ಬಿಡುಗಡೆ ಗೊಳಿಸಲಾಯಿತು.

ಮೊದಲಿಗೆ ವಕೀಲರ ಸಂಘದ ಉಪಾಧ್ಯಕ್ಷರಾದ ಕೆ. ಎಸ್. ತಮ್ಮಯ್ಯ ಸರ್ವರನ್ನು ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಎಂ. ವಿ. ಸಂಜಯ್ ರಾಜ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು, ಖಜಾಂಚಿ ಬಿ. ಸಿ. ದೇವಿಪ್ರಸಾದ್ ವಂದಿಸಿದರು.ಸAಘದ ನಿರ್ದೇಶಕರಾದ ಪಿ. ಬಿ. ದಿವ್ಯಾ ಮತ್ತು ಲತಾಕುಮಾರಿ ಪ್ರಾರ್ಥಿಸಿದರು.

ಪ್ರಧಾನ ಕಾರ್ಯದರ್ಶಿ ಎಂ. ಕೆ. ಅರುಣಕುಮಾರ್ ನಿರೂಪಿಸಿದರು. ಸಂಘದ ಪದಾಧಿಕಾರಿಗಳಾದ ಪಿ. ಆರ್. ಚಂದನ್, ಭಾನುಪ್ರಕಾಶ್, ಡಿ. ಕೆ. ರಾಜೇಶ್, ತಾಹ ಯಾಸೀನ್, ಸುದಯ್ ನಾಣಯ್ಯ, ಡಿ. ಎನ್. ಡೊಮಿನಿಕ್, ಹಿರಿಯ ಸಮಿತಿಯ ಸದಸ್ಯರಾದ ಎಸ್. ಕೆ. ನಂಜಪ್ಪ, ಕೆ. ಎನ್. ಪ್ರಭಾಕರ, ಎಸ್. ಶಂಕರ್ ಶರ್ಮ ಹಾಗೂ ಸಂಘದ ಸದಸ್ಯರು ಹಾಜರಿದ್ದರು.