ಗೋಣಿಕೊಪ್ಪಲು, ಡಿ. ೮: ಭತ್ತದ ಗದ್ದೆಗಳು ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಹಲವೆಡೆ ಭತ್ತದ ಗದ್ದೆಗಳ ವನ್ಯ ಪ್ರಾಣಿಗಳ ಹಾವಳಿಯಿಂದಾಗಿ ರೈತನು ತನ್ನ ಭೂಮಿಯನ್ನು ಕೃಷಿ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾನೆ. ಇದರಿಂದಾಗಿ ಮುಂದಿನ ದಿನದಲ್ಲಿ ರೈತರಿಗೆ, ಭತ್ತದ ಭೂಮಿಯನ್ನು ಹೊಂದಿರುವವರಿಗೆ ಅರಣ್ಯ ಇಲಾಖೆ ವತಿಯಿಂದ ಭತ್ತದ ಗದ್ದೆಯ ಸುತ್ತಲಿನ ಭಾಗದಲ್ಲಿ ಸಮುದಾಯ ಸೋಲಾರ್ ತಂತಿಗಳನ್ನು ಅಳವಡಿಸುವ ಮೂಲಕ ವನ್ಯ ಪ್ರಾಣಿಗಳಿಂದ ಆಗುವ ಉಪಟಳವನ್ನು ತಡೆಯಲು ಅರಣ್ಯ ಇಲಾಖೆಯು ಹೊಸ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ.

ಕೊಡಗಿನಲ್ಲಿ ೧೫ ಸಾವಿರಕ್ಕೂ ಅಧಿಕ ಎಕರೆಗೂ ಭತ್ತದ ಗದ್ದೆಗಳು ಪಾಳು ಬಿದ್ದಿರುವುದನ್ನು ಅರಣ್ಯ ಇಲಾಖೆಯು ಗುರುತಿಸಿದ್ದು ಈ ಭಾಗದಲ್ಲಿ ಸಮುದಾಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಭತ್ತದ ಬೆಳೆಗಳು ವನ್ಯ ಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ಸಮುದಾಯ ಸೋಲಾರ್ ತಂತಿಗಳನ್ನು ಅಳವಡಿಸಿ ಆ ಮೂಲಕ ಕೃಷಿಕನ ರಕ್ಷಣೆಗೆ ಇಲಾಖೆಯು ಮುಂದಾಗಿದೆ. ಸೌರ ಶಕ್ತಿಯ ಮೂಲಕ ಸೋಲಾರ್ ತಂತಿಗಳನ್ನು ಅಳವಡಿಸುವುದು ಇಲಾಖೆಯ ಉದ್ದೇಶವಾಗಿದೆ. ಭತ್ತದ ಭೂಮಿಗಳು ಮರುಭೂಮಿಯಾಗುತ್ತಿರುವುದನ್ನು ತಪ್ಪಿಸಲು ಈ ಯೋಜನೆ ಅನುಷ್ಠಾನಗೊಳಿಸಲು ಇಲಾಖೆಯು ವಿಶೇಷ ಪ್ರಯತ್ನ ಮುಂದುವರೆಸಿದೆ.

ಇAತಹ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ರೈತರ ಭತ್ತದ ಗದ್ದೆಗಳನ್ನು ರಕ್ಷಿಸಲು ಇಲಾಖೆಯು ಮುಂದಾಗಿದ್ದು, ಶೇ.೧೦೦ರ ಸಬ್ಸಿಡಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಇಲಾಖೆಯ ಕಾರ್ಯಕ್ರಮದಲ್ಲಿ ಒಂದಾಗಿದೆ. ಕೊಡಗಿನ ಅದರಲ್ಲೂ ವಿಶೇಷವಾಗಿ ದ.ಕೊಡಗಿನ ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ ಹಾಗೂ ಬಾಳೆಲೆ ಹೋಬಳಿಯಲ್ಲಿ ಬಹುತೇಕ ಕೃಷಿಕರು ತಮ್ಮ ಭತ್ತದ ಗದ್ದೆಗಳನ್ನು ಅನಾಧಿಕಾಲದಿಂದಲೂ ಕೃಷಿ ಮಾಡುತ್ತಲೇ ಬಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೆಳೆಗಳು ಕೈ ಸೇರುವ ಸಂದರ್ಭ ಕಾಡಾನೆಗಳು ಭತ್ತದ ಗದ್ದೆಗಳಿಗೆ ಧಾಂಗುಡಿ ಇಡುವ ಮೂಲಕ ಭತ್ತದ ಬೆಳೆಗಳು ಕಾಡಾನೆಗಳ ಪಾಲಾಗುತ್ತಿದ್ದವು. ಇದರಿಂದ ರೈತನು ನಷ್ಟಕ್ಕೊಳಗಾಗುತ್ತಿದ್ದನು. ಕಾಡಾನೆಗಳ ಉಪಟಳದಿಂದ ಭತ್ತದ ಫಸಲುಗಳು ನಾಶಗೊಂಡ ಸಂದರ್ಭ ಇಲಾಖೆಯು ನೀಡುವ ಪರಿಹಾರ ರೈತನಿಗೆ ಪ್ರಯೋಜನ ಕಾರಿಯಾಗದ ಹಿನೆÀ್ನಲೆಯಲ್ಲಿ ಕೃಷಿಕ ಹಾಗೂ ಭತ್ತದ ಬೆಳೆಗಾರರು ತಮ್ಮ ಗದ್ದೆಗಳಲ್ಲಿ ಕೃಷಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಇದರಿಂದ ಸಾವಿರಾರು ಎಕರೆ ಭತ್ತದ ಭೂಮಿಗಳು ವರ್ಷದಿಂದ ವರ್ಷಕ್ಕೆ ಪಾಳು ಬೀಳುತ್ತಿವೆ. ಮುಂದೊAದು ದಿನ ಭತ್ತದ ಗದ್ದೆಗಳು ಬರಡು ಭೂಮಿಯಾಗುವುದನ್ನು ತಪ್ಪಿಸಲು ಇಲಾಖೆಯು ಭತ್ತದ ಗದ್ದೆಗಳ ಸುತ್ತಲಿನಲ್ಲಿ ಸೋಲಾರ್ ಬೇಲಿಗಳನ್ನು ಅಳವಡಿಸುವ ಮೂಲಕ ಅರಣ್ಯ ಪ್ರದೇಶದಿಂದ ಆಗಮಿಸುವ ವನ್ಯ ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಕ್ರಮಕ್ಕೆ ಮುಂದಾಗಿದೆ.

- ಹೆಚ್.ಕೆ. ಜಗದೀಶ್