ಮಡಿಕೇರಿ, ಡಿ.೮: ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರಬಾರ ಕಾರ್ಯನಿರ್ವಹಣಾಧಿಕಾರಿಯಾಗಿ ತಾಲೂಕು ಕಂದಾಯ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಪಿ.ಎಲ್. ದೇವರಾಜು ಅಧಿಕಾರ ಸ್ವೀಕಾರ ಮಾಡಿದರು. ಓಂಕಾರೇಶ್ವರ ದೇವಾಲಯ ಕಾರ್ಯ ವ್ಯಾಪ್ತಿಯಲ್ಲಿ ನಗರದ ಕೋಟೆ ಶ್ರೀ ಮಹಾ ಗಣಪತಿ ಹಾಗೂ ಆಂಜನೇಯ ದೇವಾಲಯಗಳು ಒಳಪಡುತ್ತವೆ. ಈ ಹಿಂದೆ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಕೃಷ್ಣಪ್ಪ ಅವರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ದೇವರಾಜು ಅವರನ್ನು ನೇಮಕ ಮಾಡಲಾಗಿದೆ.