ಮಡಿಕೇರಿ, ಡಿ. ೮: ಮರಂದೋಡ ಗ್ರಾಮದಲ್ಲಿ ನಿರಂತರವಾಗಿ ನಾಲ್ಕು ದಿನಗಳಿಂದ ಆನೆಗಳ ಹಿಂಡು ಬೆಳೆ ಹಾನಿಪಡಿಸುತ್ತಿದೆ. ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅವರ ಭತ್ತದ ಗದ್ದೆಯನ್ನು ತುಳಿದು ಎರಡನೇ ಬಾರಿಗೆ ಹುತ್ತರಿ ಹಬ್ಬದ ಸಂದರ್ಭದಲ್ಲಿ ಗದ್ದೆಯನ್ನು ನಾಶಪಡಿಸಿ ಅಪಾರ ನಷ್ಟ ಸಂಭವಿಸಿದೆ. ಅಲ್ಲದೆ, ಚೋಯಮಾಡಂಡ ವಿಜು, ಮನು, ಕಟ್ಟಿ ಸುಬ್ರಮಣಿ, ಮುಕ್ಕಾಟಿ ದಯಾನಂದ ಇವರ ಗದ್ದೆಯನ್ನು ಕೂಡ ತುಳಿದು ನಾಶಮಾಡಿದೆ. ಇಲ್ಲಿಯವರೆಗೂ ನಷ್ಟದ ಪರಿಹಾರ ಯಾರಿಗೂ ಲಭಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದು, ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವೀಕ್ಷಿಸಿ ತಮಗೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.