ಕುಶಾಲನಗರ ಕೊಡವ ಸಮಾಜದ ವತಿಯಿಂದ ಸಾಂಪ್ರದಾಯಿಕ ಪುತ್ತರಿ ಹಬ್ಬ ಆಚರಣೆ ನಡೆಯಿತು. ಸಂಜೆ ಕೊಡವ ಸಮಾಜದಲ್ಲಿ ಸೇರಿ ನಂತರ ಲಘು ಉಪಹಾರ ಸೇವಿಸಿ, ೭.೫೦ಕ್ಕೆ ಸಮಾಜದಲ್ಲಿ ನೆರೆ ಕಟ್ಟಿ ನಂತರ ೮.೫೦ಕ್ಕೆ ಕದಿರು ತೆಗೆಯಲಾಯಿತು. ಹಿರಿಯರಾದ ಜಾಲಿ ತಮ್ಮಯ್ಯ ಅವರು ಗುತ್ತಿ ಪೂಜೆ ನೆರವೇರಿಸಿದರು. ಸಮಾಜದ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ, ಕಾರ್ಯದರ್ಶಿ ವಾಂಚೀರ ಮನು ನಂಜುAಡ, ಖಚಾಂಜಿ ಬಿದ್ದಾಟಂಡ ಚಿಂಗಪ್ಪ, ಸಮಾಜದ ನಿರ್ದೇಶಕರು, ಸದಸ್ಯರು ಇದ್ದರು.