ಮಡಿಕೇರಿ, ಡಿ. ೬: ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದಿAದ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ೧ನೇ ವರ್ಷದ ವಾರ್ಷಿಕೋತ್ಸವ ಸಂದರ್ಭ ಚೆಸ್ಕಾಂ ಇಲಾಖೆಯಲ್ಲಿನ ಸೇವೆಗಾಗಿ ಪ್ರಶಾಂತ್ ಮಾಲಿ, ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಚಾಲಕ ವಿ.ಜಿ. ನಾರಾಯಣ, ಮಡಿಕೇರಿ ಅಂಚೆ ಇಲಾಖೆ ಸಿಬ್ಬಂದಿ ಪಿ.ಎಂ. ಪೊನ್ನಮ್ಮ, ೭ನೇ ಹೊಸಕೋಟೆಯ ವಿಕಾಸ ಜನಸೇವಾ ಟ್ರಸ್ಟ್ನ ಅಧ್ಯಕ್ಷ ಎಚ್.ಕೆ. ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ೧ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ಮನಸ್ಸಿನಲ್ಲಿ ಭಾವನೆಗಳನ್ನು ಅರಳಿಸುವ, ಹೃದಯಕ್ಕೆ ನಾಟುವಂತೆ ಮಾಡುವ ಅಪೂರ್ವ ಶಕ್ತಿ ಸಂಗೀತಕ್ಕಿದೆ ಎಂದು ಹೇಳಿದರು.

ಭಕ್ತಿ, ಪ್ರೇಮ, ಭಾವನೆ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಹಾಡುಗಳು ಹೃದಯವನ್ನು ತಟ್ಟಬಲ್ಲವು ಎಂದು ಹೇಳಿದರು.

ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾತಂಡಗಳು ಕಂಡುಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮಡಿಕೇರಿಯಲ್ಲಿಯೂ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟು ಕಲಾಪ್ರೇಮಿಗಳಿಗೆ ತಲುಪಬೇಕಾಗಿದೆ ಎಂದು ನುಡಿದರು.

ಆರ್ಯಭಟ ಪ್ರಶಸ್ತಿ ವಿಜೇತ ಕಲಾವಿದ ರವಿ ಸಂತೋಷ್ ಮಾತನಾಡಿ, ಹಳೇಕಾಲದ ವಾದ್ಯಪರಿಕರಗಳ ಅರಿವು ಅನೇಕರಲ್ಲಿ ಇರುವುದಿಲ್ಲ. ಆಧುನಿಕ ಶೈಲಿಯ ಹಾಡುಗಾರರು ಹಳೇ ಹಾಡುಗಳ ಮಾಧುರ್ಯಕ್ಕೆ ಕಾರಣವಾಗುತ್ತಿದ್ದ ಪುರಾತನ ಕಾಲದ ಜಾನಪದೀಯ ವಾದ್ಯಪರಿಕರಗಳ ಮಹತ್ವ ಮರೆಯಬಾರದು. ದಸರಾ ಸೇರಿದಂತೆ ಸರ್ಕಾರ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳಿಗೆ ಆದ್ಯತೆ ದೊರಕಬೇಕು ಎಂದು ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಕಲಾವಿದರ ಜೀವನ ಇನ್ನೂ ಸಂಕಷ್ಟದಿAದ ಹೊರಬಂದಿಲ್ಲ. ಅದೆಷ್ಟೇ ಸಾಂಸ್ಕೃತಿಕ ಪ್ರತಿಭೆಯಿದ್ದರೂ ಸೂಕ್ತ ವರಮಾನ ತರುವ ವೃತ್ತಿಯಿಲ್ಲದೇ ಹೋದರೆ ಸಂಗೀತಗಾರನ ಜೀವನ ಒಪ್ಪತ್ತಿನ ಊಟಕ್ಕೂ ಪರದಾಡುವಂತಿರುತ್ತದೆ ಎಂದು ಹೇಳಿದರಲ್ಲದೇ, ಕಲಾವಿದರ ಪ್ರತಿಭೆಯನ್ನು ಶ್ಲಾಘಿಸುವದರ ಜತೆಜತೆಗೇ ಅವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಕಲಾಭಿಮಾನಿಗಳಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸುಸಜ್ಜಿತ ಗ್ಯಾಲರಿ ನಿರ್ಮಾಣವಾಗಿರುವುದರಿಂದಾಗಿ ಕೊಡಗಿನ ಸಾಂಸ್ಕೃತಿಕ ತಂಡಗಳಿಗೆ ಬಹಳ ಅನುಕೂಲವಾಗಿದ್ದು ಇದನ್ನು ಕಲಾವಿದರು ಹೆಚ್ಚು ಕಾರ್ಯಕ್ರಮ ನೀಡುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೆಯ್ಯಂಡ ಸತ್ಯಗಣಪತಿ ಮಾತನಾಡಿ, ಕಲಾವಿದರನ್ನು ಒಗ್ಗೂಡಿಸಲು ಮುಂದಾಗಿರುವ ಮುತ್ತಿನಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ಪ್ರಯತ್ನ ಮಾದರಿಯಾಗಿದೆ ಎಂದರು.

ಪತ್ರಕರ್ತ ಚೇತನ್ ರಾಜ್, ಮುತ್ತಿನ ಹಾರ ವಾದ್ಯಗೋಷ್ಠಿ ಕಲಾವಿದರ ಸಂಘದ ಅಧ್ಯಕ್ಷ ಸುಭಾಷ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಜಿ ಪರಮೇಶ್, ಉಪಾಧ್ಯಕ್ಷ ಸತೀಶ್, ಗೌರವ ಸಲಹೆಗಾರ ಪಿ. ರವಿ ಹಾಜರಿದ್ದರು.

ಸಂಜೆಯಿAದ ರಾತ್ರಿಯವರೆಗೂ ಕೊಡಗಿನ ೪೦ ಗಾಯಕರು ಗಾಂಧಿ ಮೈದಾನದ ಬಯಲು ರಂಗಮAದಿರದಲ್ಲಿ ವೈವಿಧ್ಯಮಯ ಹಾಡು, ಗಾಯನಗಳ ಕಾರ್ಯಕ್ರಮ ನೀಡಿ ಕಲಾಪ್ರೇಮಿಗಳ ಮನರಂಜಿಸಿದರು. ಪ್ರತಿಮಾ ರೈ, ಕೆ.ಕೆ. ಜಯಲಕ್ಷಿö್ಮ ಕಾರ್ಯಕ್ರಮ ನಿರೂಪಿಸಿದರು.