ಸೋಮವಾರಪೇಟೆ, ಡಿ. ೬: ಶನಿವಾರಸಂತೆ-ಸೋಮವಾರಪೇಟೆ ಮುಖ್ಯರಸ್ತೆಯಲ್ಲಿ ಟಿಂಬರ್ ಸಾಗಿಸುತ್ತಿದ್ದ ಲಾರಿಯೊಂದು ಮುಂಬದಿಯಿAದ ಮೇಲೆದ್ದು ನಿಂತ ಪರಿಣಾಮ ಕೆಲಕಾಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

ಹೆಗ್ಗುಳ ಗ್ರಾಮದಲ್ಲಿ ಟಿಂಬರ್ ಸಾಗಿಸುತ್ತಿದ್ದ ಲಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಮರದ ದಿಮ್ಮಿಗಳನ್ನು ತುಂಬಿದ್ದರಿAದ ಹಿಂಭಾಗದಲ್ಲಿ ಭಾರ ಅಧಿಕಗೊಂಡು ಮುಂದಿನ ಚಕ್ರಗಳು ಮೇಲೆದ್ದ ಪರಿಣಾಮ ರಸ್ತೆಯ ಮಧ್ಯೆಯೇ ಲಾರಿ ನಿಲುಗಡೆಗೊಂಡಿತು. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ಇತರ ವಾಹನಗಳ ಓಡಾಟಕ್ಕೆ ತೊಡಕಾಗಿತ್ತು. ನಂತರ ದಿಮ್ಮಿಗಳನ್ನು ಇಳಿಸಿ ಲಾರಿಯನ್ನು ಮುಂದಕ್ಕೆ ಚಾಲಿಸಲಾಯಿತು.