ಮಡಿಕೇರಿ, ಡಿ. ೬: ಕಂಗಳತ್ತ್ ನಾಡ್ ಮಂದ್ ಸಮಿತಿ ವತಿಯಿಂದ ತಾ.೧೦ ರಂದು ‘ಕಂಗಳತ್ತ್ ನಾಡ್ ಮಂದ್ ನಮ್ಮೆ’ ಕಾರ್ಯಕ್ರಮ ಮಾಯಮುಡಿ ಗ್ರಾಮದ ಕೋಲುಬಾಣೆಯಲ್ಲಿ ಆಯೋಜಿಸ ಲಾಗಿದೆ ಎಂದು ಸಮಿತಿಯ ಸಂಚಾಲಕ ಸಣ್ಣುವಂಡ.ಬಿ.ರಮೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣುವಂಡ ಕುಟುಂಬದ ಅಧ್ಯಕ್ಷ ಸಣ್ಣುವಂಡ.ಪಿ.ಸAಪತ್ ನೆರವೇರಿ ಸಲಿದ್ದಾರೆ. ನಂತರ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಆಯೋಜಿಸಲಾಗಿದ್ದು, ಮಧ್ಯಾಹ್ನ ೧೨.೩೦ ಗಂಟೆಗೆ ಊರೋರ್ಮೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮಧ್ಯಾಹ್ನ ೨ ಗಂಟೆಗೆ ಮಂದ್ ಪತ್ತ್ವೋ ಕಾರ್ಯಕ್ರಮ ನಡೆಯಲಿದೆ. ನಂತರ ಮಾಯಮುಡಿ, ಬಾಳಾಜಿ, ರುದ್ರಬೀಡು ಮೂರು ಕೇರಿಗಳ ಗ್ರಾಮಸ್ಥರು ಕೊಡವ ಪದ್ಧತಿಯಂತೆ ಮಂದ್ ಹತ್ತಲಿದ್ದಾರೆ. ನಂತರ ೨.೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ನಾಡತಕ್ಕರಾದ ಬೊಳ್ಳಜಿರ ದೇವಯ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಪಾಲ್ಗೊಳ್ಳಲಿದ್ದಾರೆ. ನಂತರ ಮಾಯಮುಡಿ ಗ್ರಾಮದ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಚೆಪ್ಪುಡೀರ ರಾಧ ಅಚ್ಚಯ್ಯ, ಚೆಪ್ಪುಡೀರ ಕುಶಾಲಪ್ಪ, ಅರುಣ್ ಮಾಚಯ್ಯ, ಮಲಚೀರ ಅಯ್ಯಪ್ಪ, ಸಣ್ಣುವಂಡ ಕಿಶೋರ್ ನಾಚಪ್ಪ, ಜಮ್ಮಡ ಸಿ. ಮೋಹನ್, ಮದ್ರೀರ ಬಿ ಕರುಂಬಯ್ಯ ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಸಂಜೆ ಏಳು ಗ್ರಾಮಗಳಿಂದ ಕೂಡಿದ ಕಂಗಳತ್ತ್ ನಾಡ್ ಹುತ್ತರಿ ಕೋಲಾಟ ನಡೆಯಲಿದೆ. ನಂತರ ಗ್ರಾಮಸ್ಥರಿಂದ ಹುತ್ತರಿ ಕೋಲಾಟ್, ಉಮ್ಮತ್ತಾಟ್, ಹುದಿಕೇರಿ ಗ್ರಾಮದ ಚಂಗುಲAಡ ಸೂರಜ್ ತಂಡದಿAದ ಕೋಲಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ ಮತ್ತು ಉಮ್ಮತಾಟ್ ನಡೆಯಲಿದೆ. ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಸಣ್ಣುವಂಡ ವಿನಯ್ ಅಯ್ಯಪ್ಪ, ಎ.ಸಿ.ಪ್ರದೀಪ, ಬಲ್ಲ್ಯಂಡ ರವಿ ಉಪಸ್ಥಿತರಿದ್ದರು.