ಮಡಿಕೇರಿ, ಡಿ. ೬: ಪತ್ರಕರ್ತ ಬಾಚರಣಿಯಂಡ ಅನುಕಾರ್ಯಪ್ಪ ಬರೆದಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸ ಕೃಷ್ಣದಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಅಪ್ಪಚೆಟ್ಟೋಳಂಡ ಮನುಮುತ್ತಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು. ೧೯೯೭ರಲ್ಲಿ ಪಾಂಡAಡ ಕುಟ್ಟಪ್ಪ ಅವರು ಆರಂಭ ಮಾಡಿದ ಕೊಡವ ಹಾಕಿ ಪಂದ್ಯಾವಳಿ ೨೦೧೮ ರವರೆಗೆ ನಡೆದು ಬಂದ ಹಾದಿಯನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಇದೀಗ ೨೦೨೩ರಲ್ಲಿ ಹಾಕಿ ಹಬ್ಬ ನಡೆಸಲಿರುವ ಅಪ್ಪಚೆಟ್ಟೋಳಂಡ ಕುಟುಂಬದವರ ಪರಿಚಯ, ಮುಂದಿನ ವರ್ಷ ಪಂದ್ಯಾವಳಿ ನಡೆಸಲಿರುವ ಕುಂಡ್ಯೋಳAಡ ಕುಟುಂಬದ ಪರಿಚಯ ಈ ಪುಸ್ತಕದಲ್ಲಿ ಅಡಕವಾಗಿದೆ. ಇನ್ನೂ ಕೊಡಗಿನಲ್ಲಿ ೧೮ ಹಾಕಿ ಒಲಂಪಿಯನ್ಗಳಿದ್ದು ಅವರನ್ನು ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಪುಸ್ತಕದ ಮುನ್ನುಡಿಯನ್ನು ಒಲಂಪಿಯನ್ ಅಂಜಪರವAಡ ಸುಬ್ಬಯ್ಯ ಬರೆದಿದ್ದಾರೆ.