ಮಡಿಕೇರಿ, ಡಿ. ೬: ೨೦೨೨-೨೩ನೇ ಸಾಲಿನಲ್ಲಿ ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಸಂಬAಧಿಸಿದAತೆ ರಾಜ್ಯದ ೩೧ ಜಿಲ್ಲೆಗಳಿಗೆ ಬೆಳೆಹಾನಿ ಪರಿಹಾರ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಕೊಡಗು ಜಿಲ್ಲೆಗೆ ರೂ.೧೧೩.೯೯ ಕೋಟಿ ಬೆಳೆ ಹಾನಿ ಪರಿಹಾರ ಬಿಡುಗಡೆಗೊಂಡಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಇತ್ತೀಚೆಗೆ ಕೊಡಗಿನ ಪರವಾಗಿ ತಾನು ಹಾಗೂ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಸುಜಾ ಕುಶಾಲಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಜಿಲ್ಲೆಯ ರೈತರ ಹಾಗೂ ಬೆಳೆಗಾರರ ಸಂಕಷ್ಟದ ಬಗ್ಗೆ ವಿವರಿಸಿ ಈ ಬಗ್ಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಒಟ್ಟು ರೂ. ೧೧೩.೯೯ ಕೋಟಿ ಪರಿಹಾರ ಹಣ ಬಿಡುಗಡೆ ಆಗಿದೆ.
ಒಟ್ಟು ಸಲ್ಲಿಕೆಯಾಗಿದ್ದ ೭೭,೦೧೧ ಅರ್ಜಿಗಳ ಪೈಕಿ ೩೯,೫೯೭ ಅರ್ಜಿಗಳು ಪರಿಗಣಿಸಲ್ಪಟ್ಟಿದ್ದು, ತಾ.೭ರಿಂದ (ಇಂದಿನಿAದ) ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ ಎಂದು ಅಪ್ಪಚ್ಚು ರಂಜನ್ ಮಾಹಿತಿ ನೀಡಿದ್ದಾರೆ.