ಮಡಿಕೇರಿ, ಡಿ. ೫: ಹುದಿಕೇರಿ ಗ್ರಾಮ ಪಂಚಾಯಿತಿ ಕೋಣಗೇರಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗವಾಹಿನಿ ಮಾತೃ ಶಕ್ತಿ ಘಟಕ ಸ್ಥಾಪಿಸಲಾಯಿತು. ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಪಂದ್ಯAಡ ಹರೀಶ್, ಕಾರ್ಯದರ್ಶಿ ಸುರೇಶ್, ತಾಲೂಕು ಬಜರಂಗ ದಳ ರಚಿಸಲಾಯಿತು ವಿಹೆಚ್‌ಪಿ ಅಧ್ಯಕ್ಷರಾಗಿ ವೆಂಕಟೇಶ್, ಕಾರ್ಯದರ್ಶಿ ಗಿರೀಶ್ ಮತ್ತು ಸಹ ಕಾರ್ಯದರ್ಶಿ ರವಿ ಹೆಚ್.ಎನ್. ಬಜರಂಗದಳ ಪ್ರವೀಣ್ ಮತ್ತು ಭಗವಾನ್ ಗೋ ರಕ್ಷಕ್ ಮೋಹನ್ ಮತ್ತು ಪುನೀತ್, ಮಾತೃ ಶಕ್ತಿ ಮೀನಾಕ್ಷಿ, ದುರ್ಗವಾಹಿನಿ ದೀಪ್ತಿ, ಸುರಕ್ಷಾ, ಪ್ರಮುಖ್ ವಿಜಯ, ವಿದ್ಯಾರ್ಥಿ ಪ್ರಮುಖ ಜೀವನ್ ಇವರುಗಳನ್ನು ಆಯ್ಕೆ ಮಾಡಲಾಯಿತು.