ಸುಂಟಿಕೊಪ್ಪ, ಡಿ. ೫: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರದ ಆದೇಶದನ್ಚಯ ದೇಸಿ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕೊಡಗರಹಳ್ಳಿಯ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆದ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಉಪ್ಪುತೋಡು ಫ್ರೆಂಡ್ಲಿ ಫ್ರೆೆ್ರಂಡ್ಸ್ ತಂಡವನ್ನು ಕಲ್ಲುಕೋರೆ ಕೆ.ಕೆ.ಬಾಯ್ಸ್ ತಂಡವು ಸೋಲಿಸಿ ಗೆಲುವಿನ ನಗೆ ಬೀರಿತು. ಪುರುಷರ ಕಬಡ್ಡಿ ಪಂದ್ಯದಲ್ಲಿ ಕೆಇಬಿ ಬಾಯ್ಸ್ ತಂಡವನ್ನು ಮಾರುತಿನಗರದ ಬೆಟಾಲಿಯನ್ ತಂಡ ಸೋಲಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಪುರುಷರ ಹಗ್ಗಜಗ್ಗಾಟದಲ್ಲಿ ಮಾರುತಿನಗರದ ಪ್ಲೀಸ್ ಕೆಣಕಬೇಡಿ ತಂಡದೊAದಿಗೆ ಅಂದಗೋವೆ ಬಸವೇಶ್ವರ ಸಂಘವು ಜಯಗಳಿತು.
ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಅಂದಗೋವೆ ಭಗವತಿ ತಂಡ ಪ್ರಥಮ ಸ್ಥಾನ ಪಡೆದರೆ, ಧೃತಿ ಉಪ್ಪುತೋಡು ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ, ಥ್ರೋಬಾಲ್ ಪಂದ್ಯದಲ್ಲಿ ಶಾಂತಿನಿಕೇತನ ಟೀಚರ್ಸ್ ತಂಡವು ಕವಿತ ಫ್ರೆಂಡ್ಸ್ ಕೊಡಗರಹಳ್ಳಿ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ಕಬಡ್ಡಿ ಟೂರ್ನಿಯಲ್ಲಿ ಶಾಂತಿನಿಕೇತನ ಶಾಲೆ ಪ್ರಥಮ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪ್ರೌಢಶಾಲಾ ವಿಭಾಗದ ಬಾಲಕರ ಕಬಡ್ಡಿ ಪಂದ್ಯದಲ್ಲಿ ಶಾಂತಿನಿಕೇತನ ‘ಎ’ ಪ್ರಥಮ ಹಾಗೂ ಶಾಂತಿನಿಕೇತನ ‘ಬಿ’ ದ್ವಿತೀಯ ಬಹುಮಾನ ಪಡೆದುಕೊಂಡಿತು. ಪ್ರೌಢಶಾಲಾ ವಿಭಾಗದ ಥ್ರೋಬಾಲ್ ಪಂದ್ಯದಲ್ಲಿ ಶಾಂತಿನಿಕೇತನ ಪ್ರಥಮ, ಸುಂಟಿಕೊಪ್ಪ ನಾಡು ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪ್ರೌಢಶಾಲಾ ವಿಭಾಗದ ವಾಲಿಬಾಲ್ ಟೂರ್ನಿಯಲ್ಲಿ ಶಾಂತಿನಿಕೇತನ ‘ಎ’ ಮತ್ತು ‘ಬಿ’ ತಂಡಗಳು ಪ್ರಥಮ, ದ್ವಿತೀಯ ಬಹುಮಾನ ಪಡೆದರು.
೧೦೦ ಮೀಟರ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಜಿ.ಎಂ.ಪಿ. ಶಾಲೆಯ ಎಸ್. ಚಂದ್ರಶೇಖರ್ ಮತ್ತು ಕೆ. ಭವಿಷ್ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಜಿಯಂಪಿ ಶಾಲೆಯ ಕೆ. ಅರ್ಚನ ಪ್ರಥಮ ಮತ್ತು ಸ್ಪಂದನ ದ್ವಿತೀಯ ಸ್ಥಾನ ಪಡೆದುಕೊಂಡರು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರಾಜಶೇಖರ್, ಅಧ್ಯಕ್ಷ ಸುನಿತ್, ಸದಸ್ಯರು, ಹಿರಿಯರಾದ ಕಾವೇರಪ್ಪ, ಕೂಟಯ್ಯ, ಕೆ.ಎಸ್. ಮಂಜುನಾಥ್, ಶಾಲೆಗಳ ಮುಖ್ಯಸ್ಥರು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.