ಕಡAಗ, ಡಿ. ೫: ಕಡಂಗ ಗ್ರಾಮದ ಯೋಧ ಹಾಗೂ ಜಿಲ್ಲೆಯ ಕ್ರೀಡಾಪಟು ಬಲ್ಲಚಂಡ ಟಿಟ್ಟೋ ಅವರ ಸ್ಮರಣಾರ್ಥಕವಾಗಿ ಕಡಂಗ ಗ್ರಾಮದ ಅರಫ ಮತ್ತು ಲಿಮ್ರಾ ಕ್ರೀಡಾ ಸಂಘದ ವತಿಯಿಂದ ಎರಡನೇ ವರ್ಷದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಕಡಂಗ ವಿಜಯ ಪ್ರೌಢಶಾಲಾ ಮೈದಾನದಲ್ಲಿ ತಾ. ೧೦ ರಂದು ನಡೆಸಲಾಗುವುದೆಂದು ಅರಫ ಮತ್ತು ಲಿಮ್ರಾ ತಂಡದ ಸಂಚಾಲಕ ರಾಶಿದ್ ತಿಳಿಸಿದ್ದಾರೆ. ಕ್ರೀಡಾಕೂಟವು ಮಧ್ಯಾಹ್ನ ೨ ಗಂಟೆಗೆ ಪ್ರಾರಂಭಗೊಳ್ಳಲಿದ್ದು, ಜಿಲ್ಲೆಯ ಎಂಟು ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ವಿಜಯ ಪ್ರೌಢಶಾಲಾ ನಿವೃತ್ತ ಮುಖ್ಯ ಉಪಾಧ್ಯಾಯಿನಿ ರಾಣಿ ಮತ್ತು ಕಡಂಗ ಗ್ರಾಮದ ನಿವೃತ್ತ ಯೋಧ ಸಲಾಂ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಅರಫಾ ಕ್ರೀಡಾ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್, ಲಿಮ್ರಾ ಕರಿಂ ಕ್ರೀಡಾ ಕಾರ್ಯದರ್ಶಿ ಅಬ್ದುಲ್ಲಾ ಎಡಪಾಲ ಹಾಜರಿದ್ದರು.