ಸೋಮವಾರಪೇಟೆ, ಡಿ. ೫: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದ ಅಂಗ ವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ, ಛದ್ಮವೇಷದಲ್ಲಿ ಪಿ.ಆರ್. ತನುಶ್ರೀ ಪ್ರಥಮ, ಕೆ.ಆರ್. ಸುಮನ ತೃತೀಯ, ಗೀತಗಾಯನ ಸ್ಪರ್ಧೆಯಲ್ಲಿ ಬಿ.ಜಿ. ವೈಭವಿ ಪ್ರಥಮ, ಸಮೂಹ ಗೀತೆಯಲ್ಲಿ ಧನ್ಯಶ್ರೀ ತಂಡ ದ್ವಿತೀಯ ಸ್ಥಾನ ಗಳಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಹತ್ತನೇ ತರಗತಿ ಕನ್ನಡ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪಡೆದ ಶಾಲೆಯ ವಿದ್ಯಾರ್ಥಿಗಳಾದ ಸಿಂಚನ ಪಿ.ಬಿ., ಶಮಂತ್ ಹಾಗೂ ಕನ್ನಡ ಶಿಕ್ಷಕಿ ಬಿ.ಡಿ. ಮಂಜುಳಾ ಅವರನ್ನು ಇದೇ ಸಂದರ್ಭ ಕಸಾಪದಿಂದ ಸನ್ಮಾನಿಸಲಾಯಿತು.