ಮಡಿಕೇರಿ, ಡಿ. ೫: ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಚಿತ್ರಕಲಾ ಸ್ವರ್ಧೆಯಲ್ಲಿ ಸಾತ್ವಿಕ್ ಆರ್. ಅನ್ವೇಕರ್ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಮಡಿಕೇರಿ ನಗರ ಸಭೆಯ ಉಪಾಧ್ಯಕ್ಷೆ ಸವಿತ ರಾಕೇಶ್ ಹಾಗೂ ಉದ್ಯಮಿ ಬಿ.ಎಂ. ರಾಕೇಶ್ ಅವರ ದ್ವಿತೀಯ ಪುತ್ರನಾಗಿರುವ ಸಾತ್ವಿಕ್ ಸಂತ ಜೋಸೆಫರ ಶಾಲೆಯ ೧೦ನೇ ತರಗತಿ ಹಾಗೂ ಮಡಿಕೇರಿ ನಗರದ ಕಲರ್ ಪ್ಯಾಲೆಟ್ ಚಿತ್ರಕಲಾ ಶಾಲೆಯ ಪ್ರಸನ್ನ ಶಿಕ್ಷಕರ ವಿದ್ಯಾರ್ಥಿಯಾಗಿದ್ದಾನೆ.