ಮಡಿಕೇರಿ, ಡಿ. ೫: ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ, ವಸ್ತು ಸಂಗ್ರಹಾಲಯ ಮಡಿಕೇರಿ, ಇತಿಹಾಸ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ‘ಇತಿಹಾಸ ಮತ್ತು ಪರಂಪರೆ ಸಂಘದ' ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಇತಿಹಾಸ ವಿಭಾಗದ ಉಪನ್ಯಾಸಕ ತ್ಯಾಗರಾಜ್ ಅವರು ಇತಿಹಾಸದ ಕುತೂಹಲಕರ ಸಂಗತಿಗಳನ್ನು ಆಸಕ್ತ ವಿದ್ಯಾರ್ಥಿಗಳಿಗೆ ಹಾಗೂ ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಈ ಸಂಘವನ್ನು ಹುಟ್ಟುಹಾಕಲಾಗಿದೆ ಎಂದರು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ್ದ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಲಿಂಗಮೂರ್ತಿ ಅವರು ಮಾತನಾಡಿ ಇತಿಹಾಸ ಎಂಬುದು ಒಂದು ತೆರೆದ ಪುಸ್ತಕ ಇದ್ದಂತೆ. ಮಾನವನ ಪ್ರತಿ ಚಟುವಟಿಕೆಗಳು ಇತಿಹಾಸವೇ ಆಗಿರುತ್ತದೆ. ಮಾನವನ ಹುಟ್ಟಿನಿಂದ ಇತಿಹಾಸ ಎಂಬುದು ಹುಟ್ಟಿಕೊಂಡಿದೆ. ಇತಿಹಾಸ ಮಾನವನ ಕತೆಯಾಗಿದೆ. ಅದನ್ನು ಇಂದಿನ ಯುವ ಜನತೆಗೆ ಅರಿವು ಮಾಡಿಕೊಡುವ ಕಾರ್ಯ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಹೊಸದಾಗಿ ಆರಂಭವಾದ ರಾಷ್ಟಿçÃಯ ಶಿಕ್ಷಣ ನೀತಿಯು ಈ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿದೆ. ಇಂದಿನ ದಿನಗಳಲ್ಲಿ ಸುಭದ್ರ ಆಡಳಿತಕ್ಕೆ ಗತಕಾಲದ ಇತಿಹಾಸದ ಸ್ಮರಣೆ ಅಗತ್ಯವಾಗಿದೆ ಎಂದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ. ಅನುಪಮ ಸಭಾಪತಿ ಅವರು ಮಾತನಾಡಿ ಒಂದು ಉತ್ತಮವಾದ ಸಂಘ ಅಸ್ತಿತ್ವಕ್ಕೆ ಬಂದಿದೆ. ಅದು ತಮ್ಮ ಮುಂದಿನ ಕಾರ್ಯಯೋಜನೆಗಳನ್ನು ಸಿದ್ಧಪಡಿಸಿಕೊಂಡು ಸಾಗಬೇಕು. ಇತಿಹಾಸವು ಎಲ್ಲರನ್ನೂ ತಲುಪುವ ಹಾಗೆ ಆಗಬೇಕು ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ನಿರ್ಮಲ ಕೆ. ಡಿ ಅವರು ಮಾತನಾಡಿ ಭಾರತದ ಐತಿಹಾಸಿಕ ಪರಂಪರೆ ಅತ್ಯಂತ ಶ್ರೀಮಂತವಾದದ್ದು. ಸಾಂಸ್ಕೃತಿಕ ನೃತ್ಯಗಳು, ಹಬ್ಬಗಳ ಹಿಂದೆ ಇತಿಹಾಸದ ಕುರುಹುಗಳಿವೆ. ಅವುಗಳನ್ನು ಶೋಧಿಸುವ ಕೆಲಸಗಳ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಕಳೆದ ಭಾರಿ ಇತಿಹಾಸ ವಿಭಾಗದಲ್ಲಿ ಅತಿಹೆಚ್ಚು ಅಂಕಗಳಿಸಿದ ಶಿವು ಅವರಿಗೆ ಸಂಘದ ಪರವಾಗಿ ಸನ್ಮಾನವನ್ನು ಮಾಡ ಲಾಯಿತು. ಅಲ್ಲದೆ ಉದ್ಘಾಟಕರಿಗೆ ಮತ್ತು ಕಾಲೇಜಿನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಾಂಶುಪಾಲೆ ಡಾ. ನಿರ್ಮಲ ಕೆ. ಡಿ. ಅವರನ್ನೂ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸ ವೃಂದದವರು, ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ರೀನಾ ಅವರು ನಿರೂಪಿಸಿದರು. ಅತಿಥಿಗಳಿಗೆ ಇತಿಹಾಸ ವಿಭಾಗದ ಉಪನ್ಯಾಸಕರಾದ ಶಿವಕುಮಾರ ಅವರು ಸ್ವಾಗತಿಸಿದರು. ಇತಿಹಾಸ ಮತ್ತು ಪಾರಂಪರಿಕ ಸಂಘದ ಅಧ್ಯಕ್ಷÀ ದೀಕ್ಷಿತ್ ಪಿ. ಪಿ ಅವರು ವಂದಿಸಿದರು.