ಪಾಲಿಬೆಟ್ಟ, ಡಿ. ೪: ಬಹುತೇಕ ಸರ್ಕಾರಿ ಶಾಲೆಗಳ ಜಾಗಗಳಿಗೆ ಮೂಲ ದಾಖಲಾತಿಗಳು ಹಾಗೂ ಆರ್‌ಟಿಸಿ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರ ಆದೇಶದ ಮೇರೆಗೆ ಕೊಡಗು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಶಾಲೆಗಳ ಮೂಲ ದಾಖಲಾತಿ ಆರ್‌ಟಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗಿದ್ದು, ಪ್ರಾರಂಭಿಕ ಹಂತವಾಗಿ ಹದ್ದುಬಸ್ತನ್ನು ಗುರುತು ಮಾಡಲು ಸರ್ವಶಿಕ್ಷಣ ಅಭಿ ಯಾನದ ಸಾಂಕೇತವಾದ ಪೆನ್ಸಿಲ್ ಕಲ್ಲನ್ನು ನಿಲ್ಲಿಸಿ ಪಾಲಿಬೆಟ್ಟ ತಮಿಳು ದುಬಾರೆ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಚಾಲನೆ ನೀಡಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರತ್ನ ಸುಬ್ಬಯ್ಯ, ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ, ಶಿಕ್ಷಣ ಸಂಯೋಜಕಿ ವಿಶಾಲಕ್ಷಿ, ಸಿಆರ್ ಪಿ. ಕರುಂಬಯ್ಯ, ಶಾಲಾ ಶಿಕ್ಷಕರು ಗಳಾದ ಮಲ್ಲಿಕೇಶ್ವರಿ, ದರ್ಮಿಣಿ, ಗಣೇಶ್, ಕುಂಟಯ್ಯ, ಸ್ಥಳೀಯ ರಾದ ಅಮ್ಮಣಿ, ಗ್ರೇಸಿ ಮೈಕೆಲ್, ನಿಮ್ಮಿ ಜೋಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.