ಮಡಿಕೇರಿ, ಡಿ. ೪: ಕನ್ನಡ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲೆ, ಕ.ಸಾ.ಪ. ಮಡಿಕೇರಿ ತಾಲೂಕು ಆಶ್ರಯದಲ್ಲಿ ಹೋಬಳಿ ಘಟಕ ಸಂಪಾಜೆ ಇದರ ಪದಾಧಿಕಾರಿಗಳ ಪದಗ್ರಹಣ ಸಮಾ ರಂಭವು ಜ್ಯೋತಿ ಪ್ರೌಢಶಾಲೆಯಲ್ಲಿ ನೆರವೇರಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಮಡಿಕೇರಿ ಕ.ಸಾ.ಪ. ಅಧ್ಯಕ್ಷ ಅಂಬೇಕಲ್ಲು ನವೀನ್ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನೆರವೇರಿ ಸಿದರು. ತಳಮಟ್ಟದ ಸಾಹಿತ್ಯ ಕಾರ್ಯ ಕ್ರಮವನ್ನು ಹೆಚ್ಚೆಚ್ಚು ನಡೆಸುವುದು ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದವರ ನೆನಪಿಗೆ ದತ್ತಿನಿಧಿಯನ್ನು ಸ್ಥಾಪಿಸಬೇಕೆಂದು ಕೇಶವ ಕಾಮತ್ ಕರೆಕೊಟ್ಟರು. ಪದಗ್ರಹಣದ ಸಂಕೇತವಾಗಿ ಪರಿಷತ್ ಧ್ವಜವನ್ನು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಗೋಪಾಲ ಪೆರಾಜೆ ಯವರಿಗೆ ಹಸ್ತಾಂತರಿಸಿದರು. ಮಡಿಕೇರಿ ಕ.ಸಾ.ಪ. ಅಧ್ಯಕ್ಷ ಅಂಬೇಕಲ್ಲು ನವೀನ ಅವರು ಘಟಕದ ಪದಾಧಿಕಾರಿ ಗಳಾಗಿ ಆಯ್ಕೆಯಾದ ಅಧ್ಯಕ್ಷ ಗೋಪಾಲ ಪೆರಾಜೆ, ಗೌರವ ಕಾರ್ಯ ದರ್ಶಿಗಳಾದ ಸಂಗೀತ ರವಿರಾಜು ಮತ್ತು ಜಗದೀಶ ಕುಂಬಳಚೇರಿ ಹಾಗೂ ಕೋಶಾಧಿಕಾರಿ ಟೀನಾ ಸಂಪಾಜೆ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ದರು. ಅಂಬೇಕಲ್ಲು ನವೀನ್ ಅವರು ಸಂಪಾಜೆ ಘಟಕ ತನ್ನ ವ್ಯಾಪ್ತಿಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸುವ ಮೂಲಕ ಕನ್ನಡ ಸೇವೆ ಮತ್ತು ಕನ್ನಡ ಅಭಿವೃದ್ಧಿಯನ್ನು ಮಾಡು ವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ 'ಕನ್ನಡ ಮಾಧ್ಯಮ ಕಲಿಕೆ ಮತ್ತು ಕನ್ನಡ ಶಾಲೆಗಳು' ಎಂಬ ವಿಷಯದ ಮೇಲೆ ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷ ಪರಪ್ಪು ಚಂದ್ರಶೇಖರ್ ಪೇರಾಲ್ ಭಾಗವಹಿಸಿ ಕನ್ನಡ ಶಾಲೆಗಳ ಸ್ಥಿತಿಗತಿಗಳು ಮತ್ತು ಕನ್ನಡ ಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಉಳಿಸಿಕೊಳ್ಳ ಬೇಕಾದ ಅಗತ್ಯತೆಯ ಬಗ್ಗೆ ವಿವರವಾಗಿ ಚರ್ಚಿಸಿದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ನಿರ್ದೇಶಕ ರಾಗಿರುವ ಡಾ. ಮಾಧವ, ಪೆರಾಜೆ ಗ್ರಾ.ಪಂ. ಅಧ್ಯಕ್ಷ ಚಂದ್ರಕಲಾ ಬಾಲಚಂದ್ರ, ಶಾಲಾ ಸಂಚಾಲಕ ಹರೀಶ್ ಮುಡ್ಕಜೆ, ಶಾಲಾ ಮುಖ್ಯೋಪಾಧ್ಯಾಯ ಎಂ.ಆರ್. ನರೇಂದ್ರ ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಕ.ಸಾ.ಪ ಮಡಿಕೇರಿ ಕಾರ್ಯದರ್ಶಿ ಕೆ.ಯು. ರಂಜಿತ್ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆಯನ್ನು ನಡೆಸಿಕೊಟ್ಟರು. ಕೊನೆಯಲಿ ಜಗದೀಶ ಕುಂಬಳಚೇರಿ ಎಲ್ಲರನ್ನು ವಂದಿಸಿದರು.