ನಾಪೋಕ್ಲು, ಡಿ. ೪: ಸ್ವಸ್ಥ ಸಮಾಜ ನಿರ್ಮಾಣದಲ್ಲಿ ದೇಶದ ಪ್ರಜೆಗಳ ಆರೋಗ್ಯದ ಪಾತ್ರ ಮಹತ್ತರವಾಗಿದ್ದು, ಇದುವೇ ರಾಷ್ಟçದ ಉನ್ನತಿ ಮತ್ತು ಅವನತಿಯ ಮಾನದಂಡವಾಗಿದೆ ಎಂದು ಜಿಲ್ಲಾ (ಸರ್ಜನ್) ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಹೇಳಿದರು. ಅವರು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಹಾಗೂ ನಾಪೋಕ್ಲು ಲಯನ್ಸ್ ಕ್ಲಬ್ ಮತ್ತು ನಾಪೋಕ್ಲು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಸಾರ್ವಜನಿಕರಿಗೆ ಆಯೋಜಿಸಿದ ಒಂದು ದಿನದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರಾಷ್ಟç ನಿರ್ಮಾಣದಲ್ಲಿ ತಾಯಿಯ ಆರೋಗ್ಯ ಮಗುವಿನ ಆರೋಗ್ಯ ಹಾಗೂ ಜೀವಿತ ಅವಧಿ ಈ ಮೂರು ಅಂಶಗಳು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮೀಣ ಜನತೆಗೆ ಆರೋಗ್ಯ ಸೇವೆಯನ್ನು ಅವರ ವ್ಯಾಪ್ತಿಯಲ್ಲಿಯೇ ನೀಡುವ ಕಾರ್ಯಕ್ರಮ ಈ ಉಚಿತ ಆರೋಗ್ಯ ತಪಾಸಣಾ ಶಿಬಿರವಾಗಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಒಟ್ಟು ೪೫೯ ರೋಗಿಗಳು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡರು. ಈ ಸಂದರ್ಭ ಸಮಸ್ಯೆಗಳಿದ್ದ ರೋಗಿಗಳಿಗೆ ಆರೋಗ್ಯ ತಜ್ಞರಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಮಾರ್ಗದರ್ಶನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ವಲಯ ಅಧ್ಯಕ್ಷ ಮುಕ್ಕಾಟಿರ ವಿನಯ್, ಸ್ಥಳಿಯ ಲಯನ್ಸ್ ಅಧ್ಯಕ್ಷ ಕುಂಡಿಯೋಳAಡ ಗಣೇಶ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಆರೋಗ್ಯ ಇಲಾಖೆಯ ವೃತ್ತ ಅಧಿಕಾರಿ ಬಿದ್ದಾಟಂಡ ಮೇರಿ ಚೆಟ್ಟಿಯಪ್ಪ, ಸಮುದಾಯ ಆರೋಗ್ಯ ಕೇಂದ್ರದ ವ್ಯವಸ್ಥಾಪಕ ಮಧುಸೂದನ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಚುನಾಯಿತ ಪ್ರತಿನಿಧಿಗಳು ಸಂಘ-ಸAಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.