ಮುಳ್ಳೂರು, ಡಿ. ೩: ಸಮೀಪದ ಶನಿವಾರಸಂತೆ ಪ್ರಜ್ವಲ್ ಎಜುಕೇಶನ್ ಟ್ರಸ್ಟ್ನ ಕಾವೇರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ‘ಕಾವೇರಿ ಸಂಭ್ರಮ’ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮೀಪದ ಆಲೂರುಸಿದ್ದಾಪುರದಿಂದ ಶನಿವಾರಸಂತೆ ಕಾವೇರಿ ಕಾಲೇಜಿನ ತನಕ ಸುಮಾರು ೧೫ ಕಿ.ಮೀ. ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಸ್ಪರ್ಧೆಗೆ ಕಾವೇರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ದೇವರಾಜ್ ಚಾಲನೆ ನೀಡಿದರು. ಈ ಸಂದರ್ಭ ಉಪನ್ಯಾಸಕ ಕಾಂತರಾಜ್, ದೈಹಿಕ ಶಿಕ್ಷಣ ಶಿಕ್ಷಕ ಭಾಸ್ಕರ್ ಹಾಜರಿದ್ದರು.

ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಕಾಲೇಜಿನ ಪಿಯುಸಿ ವಿಭಾಗದ ಬಾಲಕರ ವಿಭಾಗದಲ್ಲಿ ಉನ್ನೇಶ್ (ಪ್ರ), ಅಕ್ಷಯ್ (ದ್ವಿ) ಮತ್ತು ವರುಣ್ (ತೃ) ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಶ್ರೀನಿಧಿ (ಪ್ರ), ವಿಶ್ರುತ (ದ್ವಿ) ಮತ್ತು ರೇವತಿ (ತೃ) ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಮನಿಷ್ (ಪ್ರ), ತೇಜಸ್ (ದ್ವಿ) ಮತ್ತು ಇಮ್ರಾನ್ (ತೃ) ಸ್ಥಾನ ಪಡೆದುಕೊಂಡಿದ್ದಾರೆ.