ಮಡಿಕೇರಿ, ಡಿ. ೩: ಉಡೋತ್ಮೊಟ್ಟೆ ಗ್ರಾಮದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ತಾ. ೬ ಮತ್ತು ೭ ರಂದು ವರ್ಷಾವಧಿ ನೇಮೋತ್ಸವ ಹಾಗೂ ಪರಿವಾರ ಸತ್ಯ ದೈವಗಳ ನೇಮೋತ್ಸವ ನಡೆಯಲಿದೆ.
ತಾ. ೬ ರಂದು ಬೆಳಿಗ್ಗೆ ೭.೩೦ ಗಂಟೆಗೆ ಗಣಪತಿ ಹೋಮ ನಡೆಯಲಿದ್ದು, ನಂತರ ಪ್ರಸಾದ ವಿತರಣೆಯಾಗಲಿದೆ.
ಸಂಜೆ ೫.೩೦ಕ್ಕೆ ದೈವಗಳ ಭಂಡಾರ ಇಳಿಸುವುದು. ರಾತ್ರಿ ೭ ಗಂಟೆಯಿAದ ತಾ. ೭ರವರೆಗೆ ಮಂತ್ರವಾದಿ ಗುಳಿಗ, ಕಲ್ಲುರ್ಟಿ ದೈವ, ಧರ್ಮ ದೈವ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ.