ಮುಳ್ಳೂರು, ಡಿ. ೩: ಸಮೀಪದ ಶನಿವಾರಸಂತೆ ಕಾವೇರಿ ವಿದ್ಯಾಸಂಸ್ಥೆಯ ‘ಕಾವೇರಿ ಸಂಭ್ರಮ-೨೦೨೨ ‘ವಾರ್ಷಿಕೋತ್ಸವದ ಪ್ರಯುಕ್ತ ತಾ.೯ರಂದು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಜಾನಪದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾಸಂಸ್ಥೆಯ ಪ್ರಕಟಣೆ ತಿಳಿಸಿದೆ. ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ೫ ಸಾವಿರ, ದ್ವಿತೀಯ ೩ ಸಾವಿರ ಮತ್ತು ತೃತೀಯ ೨ ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಂತರ್ ಶಾಲಾ ವಿದ್ಯಾರ್ಥಿಗಳು ಮೊ.ನಂ ೮೮೬೭೨೧೭೨೫೦, ೯೪೮೦೫೫೭೦೧೬ಗೆ ಸಂಪರ್ಕಿಸಲು ಕೋರಿದೆ