ವೀರಾಜಪೇಟೆ, ಡಿ. ೩: ವೀರಾಜಪೇಟೆ ತಾಲೂಕಿನ ಅನೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊAಡಿದೆ. ಇತ್ತೀಚಿನ ಮಳೆಯಿಂದಾಗಿ ತಡವಾಗಿ ಕಾಮಗಾರಿ ಪ್ರಾರಂಭಿಸಲಾಗಿದ್ದು ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ತಾಲೂಕಿನ ಹೆಗ್ಗಳ ನಿರ್ಮಲಗಿರಿ ಚರ್ಚ್ ರಸ್ತೆಗೆ ರೂ,೫ ಲಕ್ಷ ಅನುದಾನದಲ್ಲಿ ಕಾಂಕ್ರಿಟ್ ರಸ್ತೆ ಹಾಗೂ ಹೆಗ್ಗಳ-ಬೂದಿಮಾಳ ಮುಖ್ಯರಸ್ತೆಗೆ ರೂ,೧೧ ಲಕ್ಷ ಅನುದಾನದಲ್ಲಿ ನಡೆದ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಅನುದಾನ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಕಾಮಗಾರಿ ನಡೆಯುವ ಸಂದರ್ಭ ಕಳಪೆಯಾಗದಂತೆ ಗ್ರಾಮಸ್ಥರು ಎಚ್ಚರ ವಹಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಈಗಾಗಲೇ ಗ್ರಾಮೀಣ ಭಾಗದ ಅನೇಕ ರಸ್ತೆಗಳ ಕಾಮಗಾರಿ ಮುಗಿದಿದೆ. ಇನ್ನು ಉಳಿದಿರುವ ಮುಖ್ಯರಸ್ತೆ ಹಾಗೂ ಎಲ್ಲಾ ರಸ್ತೆಗಳನ್ನು ಕೆಲವೆ ದಿನಗಳಲ್ಲಿ ಅಭಿವೃದ್ಧಿ ಗೊಳಿಸುವುದಾಗಿ ತಿಳಿಸಿದರು.. ಕಾಂಕ್ರಿಟ್ ರಸ್ತೆ ಉದ್ಘಾಟನೆ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಶಕ್ತಿ ಕೇಂದ್ರದ ಪ್ರವೀಣ್, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದ, ಸದಸ್ಯರಾದ ಬೋಪಣ್ಣ, ಲಕ್ಷಿö್ಮ, ಹೆಗ್ಗಳ ಚರ್ಚ್ ಧರ್ಮಗುರು ಜೋಸೆಫ್, ಅಂತೋಣಿ, ಗುತ್ತಿಗೆದಾರರಾದ ಸಿ.ಪ್ರವೀಣ್ ಮತ್ತು ಎ.ಹರೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.