ಮಡಿಕೇರಿ: ಸಂಪಾಜೆ ಗ್ರಾಮದ ಶ್ರೀ ಲಕ್ಷಿö್ಮ ಬಾಲಸುಬ್ರಹ್ಮಣ್ಯ ದೇವಸ್ಥಾನ ಚೆಡಾವು ಸಂಪಾಜೆಯಲ್ಲಿ ಪಂಚಮಿ ಮತ್ತು ಷಷ್ಠಿ ಪೂಜಾ ಕಾರ್ಯಕ್ರಮ ನಡೆಯಿತು. ನ. ೨೮ ರಂದು ರಾತ್ರಿ ಗಂಟೆ ೭ ರಿಂದ ಶ್ರೀ ಪಂಚಾನನ ಭಜನಾ ತಂಡ ಹಾಗೂ ಸ್ಥಳೀಯ ಭಕ್ತಾಭಿಮಾನಿಗಳಿಂದ ಭಜನೆ ಕಾರ್ಯಕ್ರಮ ಮತ್ತು ಕಾಂತಾರ ಚಲನಚಿತ್ರ ಪ್ರದರ್ಶಿಸಲಾಯಿತು,

ತಾ. ೨೯ ರಂದು ಶ್ರೀ ಮಹಾಗಣಪತಿ ಭಜನಾ ತಂಡ ಅಡೂರು ಇವರಿಂದ ಭಜನಾ ಕಾರ್ಯಕ್ರಮ ನಡೆದು ನಂತರ ಮಹಾಪೂಜೆ, ಪ್ರಸಾದ ವಿತರಣೆಯ ನಂತರ ಅನ್ನಸಂತರ್ಪಣೆ ನಡೆಯಿತು.ಕಡಂಗ: ಸಮೀಪದ ಅರಪಟ್ಟು ಗ್ರಾಮದಲ್ಲಿರುವ ಶ್ರೀ ಭಗವತಿ ದೇವಿ (ವೈಷ್ಣವಿ ದೇವಿ) ಇತಿಹಾಸ ಪ್ರಕಾರ ಕೇರಳದ ಚೋಯಲಿ ಎಂಬಲ್ಲಿ ಮೂಲ ಸ್ಥಾನ ಹೊಂದಿದ್ದು ಸುಮಾರು ೭೦೦ ವರ್ಷಗಳ ಹಿಂದೆ ಅರಪಟ್ಟು ಗ್ರಾಮದಲ್ಲಿ ನೆಲೆಕಂಡು ಭಕ್ತರು ಆರಾಧಿಸಲ್ಪಡುತ್ತಿದ್ದಾಳೆ.

ಈ ದೇವಾಲಯದಲ್ಲಿ ಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಗುಡಿ ಇದ್ದು ಭಕ್ತಾದಿಗಳು ಪೂಜಿಸಲ್ಪಟ್ಟಿದೆ. ಶ್ರೀ ಭಗವತಿ ದೇವಿ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಪೂಜೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ವಿದ್ಯಾಧರ್ ಭಟ್ ಹಾಗೂ ಕಿರಣ್ ಕುಮಾರ್‌ರವರ ನೇತೃತ್ವದಲ್ಲಿ ನಡೆಸಲಾಯಿತು. ಪೂಜಾ ಪ್ರಯುಕ್ತ ಅನ್ನದಾನವನ್ನು ಚಲಮಂಡ ರಾಜೇಶ್ ಮತ್ತು ಸಂಸಾರದ ವತಿಯಿಂದ ಏರ್ಪಡಿಸಲಾಯಿತು. ಪೂಜೆಯಲ್ಲಿ ದೇವಸ್ಥಾನದ ಅಧ್ಯಕ್ಷೆ ನೆರಪಂಡ ಚಿತ್ರ ಬೆಳ್ಳಿಯಪ್ಪ ಹಾಗೂ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದ ನಾಗದೇವರ ಭನದಲ್ಲಿ ಷಷ್ಠಿ ಪೂಜೆ ನಡೆಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಅಕ್ಕಪಕ್ಕದ ಗ್ರಾಮಗಳ ಮತ್ತು ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು. ಕುಶಾಲನಗರದ ಸೋಮಶೇಖರ್ ಭಟ್ ಮತ್ತು ತಂಡದವರು ಪೂಜಾ ಕಾರ್ಯವನ್ನು ನೆರವೇರಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಈ ಪೂಜಾ ಕಾರ್ಯದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.