ಮೂರ್ನಾಡು, ಡಿ. ೨: ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಪ್ರಪ್ರಥಮ ಬಾರಿಗೆ ಹಾಕಿ ಉತ್ಸವವನ್ನು ಮಾಡಲಾಯಿತು. ಈ ಹಾಕಿ ಉತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಮೂರ್ನಾಡು ಎಂ. ಬಾಡಗ ಸ್ಪೋಟ್ಸ್ ಅಂಡ್ ಕಲ್ಚರಲ್ ಕ್ಲಬ್ನ ಅಧ್ಯಕ್ಷ ಕಂಬೀರAಡ ಸತೀಶ್ ಮುತ್ತಪ್ಪ, ಕಾರ್ಯದರ್ಶಿ ಮುಕ್ಕಾಟಿರ ಕ್ಯಾರಿ ಕರುಂಬಯ್ಯ, ಖಜಾಂಜಿ ಮಡೆಯಂಡ ಪ್ರೀಣಾ ಅವರು ಆಗಮಿಸಿದ್ದರು.
ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಈ ರೀತಿಯ ಪಂದ್ಯಾವಳಿಗಳು ಅವಶ್ಯಕ. ಈ ಪಂದ್ಯಾವಳಿಯ ವಿಶೇಷತೆಯೆಂದರೆ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನಿಂದ ನಾಲ್ಕು ವಿದ್ಯಾರ್ಥಿಗಳನ್ನು ಆಯ್ಕೆಮಾಡಿ ಒಟ್ಟು ೧೬ ವಿದ್ಯಾರ್ಥಿಗಳ ಒಂದೊAದು ತಂಡವನ್ನು ಮಾಡಿ ಹಾಕಿ ಆಟವನ್ನು ನಡೆಸಲಾಯಿತು. ಈ ರೀತಿಯ ವಿಭಿನ್ನವಾದ ಪ್ರಯತ್ನವನ್ನು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣನವರು ಆಡಳಿತ ಮಂಡಳಿಯವರ ಸಹಕಾರದಿಂದ ಆಯೋಜಿಸಿದ್ದರು.
ಈ ಹಾಕಿ ಉತ್ಸವದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಟ್ಟಡ ಪೂವಣ್ಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ರಶ್ಮಿ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥ ಪ್ರಶಾಂತ್ ಹಾಗೂ ವಿಭಾಗದ ಶಿಕ್ಷಕ ವೃಂದ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.