ಗೋಣಿಕೊಪ್ಪ ವರದಿ, ಡಿ. ೨: ಶ್ರೀಮಂಗಲ ವನ್ಯಜೀವಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂಘದ ವತಿಯಿಂದ ಶ್ರೀಮಂಗಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಬ್ರಹ್ಮಗಿರಿ ವನ್ಯಧಾಮಕ್ಕೆ ಚಾರಣ ಕಾರ್ಯಕ್ರಮ ನಡೆಸಲಾಯಿತು. ಇರ್ಪು ಜಲಪಾತ, ನರಿಮಲೆ ಬೆಟ್ಟ ಹತ್ತಿ ಸಂಭ್ರಮಿಸಿದರು. ಪರಿಸರದ ಮಹತ್ವ, ಗಿಡ, ಮರ, ಬಳ್ಳಿಗಳ ಪರಿಚಯ ಮಾಡಲಾಯಿತು. ೫೬ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವನ್ಯಜೀವಿ ಸಂಘದ ಉಪಾಧ್ಯಕ್ಷ ಕುಂಞAಗಡ ಬೋಸ್ ಮಾದಪ್ಪ, ಸದಸ್ಯೆ ಶೈಲಾ ಇದ್ದರು.