ಕಾರ್ತಿಕ, ವೃಶ್ಚಿಕ ಮಾಸದ ಅಮಾವಾಸ್ಯೆ-ವಿಶಾಖ ನಕ್ಷತ್ರ ಕೂಡಿ ಬಂದ ೨೩-೧೧-೨೦೨೨ ರಂದು ‘‘ಪುತ್ತರಿ ಕುರಿಪ’’ ಪದ್ಧತಿಯಂತೆ ಪಾಡಿ ಇಗ್ಗುತ್ತಪ್ಪ ದೇವರ ನೆಲೆಯಲ್ಲಿ ಜ್ಯೋತಿಷ್ಯ ಆಧಾರದಲ್ಲಿ, ೭-೧೨-೨೦೨೨ರ ಹುಣ್ಣಿಮೆ, ರಾತ್ರಿ, ಚಂದ್ರನು ತನ್ನ ಉಚ್ಚಸ್ಥಾನವಾದ ವೃಷಭರಾಶಿ-ರೋಹಿಣಿ ನಕ್ಷತ್ರದಲ್ಲಿರುವಾಗ ಕದಿರು ತೆಗೆಯುವುದೆಂದು ಊರಿನ ಹಿರಿಯರು ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಈಗಾಗಲೇ ನಿರ್ಧರಿಸಲಾಗಿದೆ. ಅದರಂತೆ ತಾ. ೭-೧೨-೨೦೨೨ರ ಬೆಳಿಗ್ಗೆ ೧೦-೩೦ ಗಂಟೆಯಿAದ ತಾ. ೮-೧೨-೨೦೨೨ರ ಬೆಳಿಗ್ಗೆ ೯-೩೦ ರ ತನಕ ಹುಣ್ಣಿಮೆ ಮತ್ತು ರೋಹಿಣಿ ನಕ್ಷತ್ರ ಇರುತ್ತದೆ. ಹುಣ್ಣಿಮೆ ಮತ್ತು ರೋಹಿಣಿ ನಕ್ಷತ್ರವಿರುವ ಕಾಲವು ಕದಿರು ತೆಗೆಯಲು ಪ್ರಶಸ್ತವೆಂದು ನಮ್ಮ ಹಿರಿಯರು, ಜ್ಯೋತಿಷ್ಯ ಶಾಸ್ತç ಹೇಳುತ್ತದೆ. ಕದಿರನ್ನು ಮನೆಗೆ ತರಬಹುದಾದ ಸಮಯ ಅಂದರೆ ೭-೧೨-೨೨ರ ರಾತ್ರಿ ೮.೫೦ರ ಸಮಯವು ಕರ್ಕಾಟಕ ಲಗ್ನವಾಗು ತ್ತದೆ. ಅಂದರೆ ಉದಯ ಲಗ್ನ ಕರ್ಕಾಟಕ, ಲಗ್ನವು ಶ್ರೀರಾಮನ ನಕ್ಷತ್ರ ಪುನರ್ವಸು ನಕ್ಷತ್ರದಲ್ಲಿದೆ. ಲಗ್ನವನ್ನು ಗುರು ಮತ್ತು ಶನಿಗ್ರಹಗಳು ದೃಷ್ಟಿಸುತ್ತಾರೆ. ಗುರುವನ್ನು ಶನಿಯು ತನ್ನ ೩ನೇ ದೃಷ್ಟಿಯಿಂದ ವೀಕ್ಷಿಸುತ್ತಾನೆ. ಸೂರ್ಯ ನನ್ನು ಗುರು ದೃಷ್ಟಿಸುತ್ತಾನೆ. ಕೇಂದ್ರದಲ್ಲಿರುವ ಕೇತು ಮಾಂದಿಯರನ್ನು ಶನಿಯು ದೃಷ್ಟಿಸುತ್ತಾನೆ. ಲಗ್ನಾಧಿಪತಿಯಾದ ಚಂದ್ರನು ಭೂಮಿ ಪುತ್ರ ಕುಜನೊಡನೆ ರೋಹಿಣಿಯಲ್ಲಿ ಕುಜ, ಸೂರ್ಯ, ಬುಧ, ಶುಕ್ರರನ್ನು ದೃಷ್ಟಿಸುತ್ತಾನೆ. ಭೂಮಿ ಪುತ್ರ ಕುಜನು ದೇವ ಸೇನಾಧಿಪತಿ ಸುಬ್ರಹ್ಮಣ್ಯ ಸುಬ್ಬರಾಯ, ಇಗ್ಗುತ್ತಪ್ಪನನ್ನು ಪ್ರತಿನಿಧಿಸುವುದು ನಮಗೆಲ್ಲಾ ತಿಳಿದ ವಿಷಯವೇ. ರವಿಯನ್ನು ಗುರು ದೃಷ್ಟಿಸುವುದು ಶುಭಲಕ್ಷಣ. ಶ್ರೇಷ್ಠರಿಗೆ ಶುಭವಾಗುವ ಕಾಲವೆಂದು ಸೂಚಿಸುತ್ತದೆ. ಶನಿಯು ಗುರುವನ್ನು ದೃಷ್ಟಿಸುವ ಲಕ್ಷಣ ನೋಡಿದರೆ ಕೆಲವು ರಾಜಕಾರಣಿಗಳು ತಮ್ಮ ಅಧಿಕಾರವನ್ನು ತಾವಾಗಿಯೇ ಬಿಟ್ಟು ಬಿಡುವ ಸೂಚನೆಯಿದೆ ! ಭೂಮಿ ಬೆಳೆ-ವ್ಯವಸಾಯ, ಚೆನ್ನಾಗಿ ಫಲಿಸಬಹುದು. ಹೆಂಗಸರಿಗೆ ಕಷ್ಟಕಾಲ. ಕೊಡಗಿಗೆ ಚೋರ ಭಯವಿದ್ದರೂ ಕುಜನು ಶುಕ್ರನನ್ನು ದೃಷ್ಟಿಸುವುದರಿಂದ ಕುಜ, ಇಗ್ಗುತ್ತಪ್ಪ ಸತ್ಯವಂತರಿಗೆ, ತನ್ನ ಭಕ್ತರಿಗೆ ಇಂಬನ್ನೀಯುವ ಸೂಚನೆಯಿದೆ. ಧಾನ್ಯಲಕ್ಷಿö್ಮ ಸರ್ವರ ಮನೆಯಲ್ಲೂ ತುಂಬಿ ತುಳುಕಲಿ ಪೊಲಿದೇವ.
-ಕರೋಟಿರ ಶಶಿ ಸುಬ್ರಮಣಿ, ವೀರಾಜಪೇಟೆ.