ಮಡಿಕೇರಿ, ಡಿ. ೨: ಚೆಟ್ಟಳ್ಳಿಯ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಬೆಳೆಗಾರರಿಗೆ ಮತ್ತಷ್ಟು ಹತ್ತಿರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಣೆಯಾಗುತ್ತದೆ. ಗ್ರಾಮೀಣ ಪ್ರದೇಶದ ರೈತರಿಗೆ ಜಾಗೃತಿ ಮೂಡಿಸುವ ಮೂಲಕ ಮಿಶ್ರಬೆಳೆ ಬೇಸಾಯಕ್ಕೆ ಒಲವು ಮೂಡಿಸುವ ಕೆಲಸ ಕೇಂದ್ರದಿAದ ಆಗಬೇಕೆಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಉಪ ಕೇಂದ್ರವಾಗಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ೭೫ ನೇ ವರ್ಷಾಚರಣೆಯ ಪ್ರಯುಕ್ತ ಪೌಷ್ಟಿಕ ಭದ್ರತೆ ಹಾಗೂ ಜೀವನೋಪಾಯಕ್ಕಾಗಿ ಆಧ್ರ್ರ ಉಷ್ಣ ವಲಯದ ತೋಟಗಾರಿಕಾ ಬೆಳೆಗಳ ೨ ದಿನಗಳ ರಾಷ್ಟಿçÃಯ ವಿಚಾರ ಸಂಕಿರಣವು ‘ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್’ ಸಹಯೋಗದೊಂದಿಗೆ ನಗರದ ಕ್ರಿಸ್ಟಲ್ ಕೋರ್ಟ್ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕರು, ಕೊಡಗಿನ ಕಿತ್ತಳೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ. ಆದರೆ, ಇಂದು ಕಿತ್ತಳೆ ನಶಿಸಿ ಹೋಗಿದೆ. ಈ ನಡುವೆ ಬೇರೆಡೆಯ ಕಿತ್ತಳೆಯನ್ನು ಕೊಡಗಿನ ಕಿತ್ತಳೆ ಎಂದು ಜಿಲ್ಲೆಯಲ್ಲಿಯೇ ಮಾರಾಟವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗಿನಲ್ಲಿ ಕಿತ್ತಳೆ ಪುನಶ್ಚೇತನಕ್ಕೆ ತಜ್ಞರು ಕಾರ್ಯೋನ್ಮುಖಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ತೋಟಗಾರಿಕಾ ಬೆಳೆಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ ಮಿಶ್ರಬೆಳೆ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿAದ ಸ್ಥಳ ಪರಿವೀಕ್ಷಣೆ ಮಾಡುವುದು ಕಡಿಮೆಯಾಗಿದೆ. ಮೊದಲಿನ ರೀತಿಯಲ್ಲಿ ರೈತರಿಗೆ ಅವರಿರುವ ಸ್ಥಳಕ್ಕೆ ತೆರಳಿ ಸೂಕ್ತ ಮಾರ್ಗದರ್ಶನ
(ಮೊದಲ ಪುಟದಿಂದ) ನೀಡಬೇಕೆಂದು ಸಲಹೆ ನೀಡಿದರು. ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಮುಂದಾದಲ್ಲಿ ಉತ್ತಮ ಇಳುವರಿಯೊಂದಿಗೆ ಹೆಚ್ಚಿನ ಆದಾಯ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬೆಳೆಗಳ ಇಳುವರಿ ಕಡಿಮೆಯಾಗಲು ಹವಾಮಾನ ವೈಪರೀತ್ಯ, ವನ್ಯಜೀವಿಗಳ ದಾಳಿ ಕಾರಣವಾಗಿದೆ. ಇದಕ್ಕೆ ಪರ್ಯಾಯವಾಗಿ ನಷ್ಟವನ್ನು ಸರಿದೂಗಿಸಲು ತೋಟಗಾರಿಕಾ ಬೆಳೆಗಳು ಸಹಕಾರಿಯಾಗುತ್ತದೆ ಎಂದ ಅವರು, ರಾಸಾಯನಿಕ ಉತ್ಪನ್ನಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದಕ್ಕಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಕಾಫಿ ಬೋರ್ಡ್ನ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಕೃಷಿಯ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದಿದ್ದಲ್ಲಿ ಉತ್ತಮ ಇಳುವರಿ ಪಡೆಯುವುದು ಅಸಾಧ್ಯ. ಮೊದಲು ಕೃಷಿಯ ಬಗ್ಗೆ ತಿಳಿದುಕೊಳ್ಳಬೇಕು. ಮಿತ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆಯಲು ಅವಕಾಶವಿದೆ. ಕೃಷಿಯ ಜೊತೆಗೆ ತರಕಾರಿ, ಹೂ, ಹಣ್ಣಿನ ಗಿಡಗಳನ್ನು ಬೆಳೆದು ಮಾರಾಟ ಮಾಡುವುದರಿಂದ ಪ್ರತಿ ವಾರ ಹಣ ಗಳಿಸಬಹುದು. ಪರ್ಯಾಯ ಬೇಸಾಯದಿಂದ ಬದುಕು ಕಟ್ಟಿಕೊಳ್ಳಬಹುದು. ತಾಂತ್ರಿಕತೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ‘ಅರ್ಕಾ ಕೂರ್ಗ್ ರವಿ’ ಎಂಬ ನೂತನ ಬಟರ್ಫ್ರೂಟ್ ತಳಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಬೆಂಗಳೂರು ಐಸಿಎಆರ್, ಐಐಹೆಚ್ಆರ್ ಉಪಾಧ್ಯಕ್ಷ ಡಾ. ಸಿ. ಅಶ್ವತ್ಥ್, ನಿರ್ದೇಶಕಿ ಡಾ. ದೇಬಿ ಶರ್ಮ, ಚೆಟ್ಟಳ್ಳಿ ಕೇಂದ್ರದ ವಿಜ್ಞಾನಿ ಡಾ. ರಾಜೇಂದ್ರನ್ ಹಾಜರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ತೋಟಗಾರಿಕ ಬೆಳೆಗಳ ಅನುವಂಶಿಕ ವೈವಿಧ್ಯತೆ-ಸಂರಕ್ಷಣೆ, ಬಳಕೆ ಮತ್ತು ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಪದ್ಧತಿ ಮಾದರಿಗಳು ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸಸ್ಯ ಸಂರಕ್ಷಣೆ, ಪರಾಗಸ್ಪರ್ಶಗಳು ಮತ್ತು ಜೇನು ಸಾಕಾಣೆ, ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಿದರು.