ವೀರಾಜಪೇಟೆ, ಡಿ. ೧: ವೀರಾಜಪೇಟೆಯ ಕೊಡಗು ಹ್ಯೂಮಾನಿಟಿ ಟ್ರಸ್ಟ್ ವತಿಯಿಂದ ನಾಲ್ಕನೇ ವರ್ಷದ ಅಂಗವಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಗರದ ಮೊಗರಗಲ್ಲಿಯ ಮದರಸ ಸಭಾಂಗಣದಲ್ಲಿ ನಡೆಯಿತು.
ಟ್ರಸ್ಟ್ನ ಅಧ್ಯಕ್ಷ ಶಫೀ ಅಹಮದ್, ಮದರಸದ ಕಾರ್ಯದರ್ಶಿ ಅಸ್ಗರ್ ಹುಸೇನ್, ಪುರಸಭೆ ಸದಸ್ಯ ಮಹಮ್ಮದ್ ರಾಫಿ, ಅಬ್ದುಲ್ ಜಲೀಲ್, ವಕೀಲ ರಫಿಕ್, ಸಮಾಜ ಸೇವಕ ಎಜಾಜ್ ಸೇರಿದಂತೆ ಆನೇಕ ಗಣ್ಯರು ಸಂಘದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,
ಮಣಿಪಾಲ್ ಆಸ್ಪತ್ರೆಯ ವೈದ್ಯೆ ಡಾ. ರೇಷ್ಮ, ಆಯುಶ್ ಮತ್ತು ಸಿಬ್ಬಂದಿಗಳು ಸಾರ್ವಜನಿಕರಿಗೆ ರಕ್ತದ ಒತ್ತಡ, ಸಕ್ಕರೆ ಅಂಶ, ಇಸಿಜಿ ಸೇರಿದಂತೆ ಅನೇಕ ಪರೀಕ್ಷೆಯನ್ನು ಮಾಡಿದರು.
ಸುಮಾರು ನೂರ ಮೂವತ್ತು ಮಂದಿ ಅಗತ್ಯವಾದ ಆರೋಗ್ಯದ ಪರೀಕ್ಷೆ ಮಾಡಿಸಿದರು. ಈ ಸಂದರ್ಭ ಸದಸ್ಯರಾದ ಅಸ್ಲಾಂ, ಅಡ್ಡುಪೈಜಲ್, ಮುಬಿನ್, ಶಮಿಂ, ಅಸೀಮ್, ರಿಯಾನ್, ಇಮ್ರಾನ್ ಸೇರಿದಂತೆ ರಕ್ತದಾನ ತಂಡದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.