ನಾಪೋಕ್ಲು, ಡಿ. ೨: ನಾಪೋಕ್ಲು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನುಪಮಾ ಜ್ಞಾಪಕಾರ್ಥ ಮುಕ್ತ ಹಾಕಿ ಪಂದ್ಯಾಟದ ಕ್ವಾರ್ಟರ್ ಫೈನಲ್ಸ್ ಪಂದ್ಯಾಟದಲ್ಲಿ ಬೇಂಗ್ನಾಡು ಫೋನಿಕ್ಸ್, ಬೇಗೂರು, ಡಾಲ್ಫಿನ್ಸ್ ಮತ್ತು ಶಿವಾಜಿ ಎ ತಂಡಗಳು ಜಯಗಳಿಸುವದರ ಮೂಲಕ ಸೆಮಿಫೈನಲ್ ಪ್ರವೇಶಿಸಿವೆ.
ಬೇಂಗ್ನಾಡ್ ಫೋನಿಕ್ಸ್ ಮತ್ತು ಮಲ್ಮ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಬೇಂಗ್ನಾಡ್ ತಂಡವು ಮಲ್ಮ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿತು. ಬೇಗೂರು ಮತ್ತು ಪೊದ್ದಮಾನಿ ತಂಡಗಳ ನಡುವಿನ ಪಂದ್ಯದಲ್ಲಿ ಬೇಗೂರು ತಂಡವು ಪೊದ್ದಮಾನಿ ತಂಡವನ್ನು ೫-೨ ಗೋಲುಗಳ ಅಂತರದಿAದ ಶೂಟ್ಔಟ್ನಲ್ಲಿ ಮಣಿಸಿತು. ಶಿವಾಜಿ ಎ ಮತ್ತು ಮೂರ್ನಾಡು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಶಿವಾಜಿ ತಂಡವು ಮೂರ್ನಾಡು ತಂಡವನ್ನು ೩-೧ ಗೋಲುಗಳ ಅಂತರದಿAದ ಸೋಲಿಸಿತು. ಡಾಲ್ಫಿನ್ಸ್ ಮತ್ತು ಅಂಜಿಕೇರಿನಾಡು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡಾಲ್ಫಿನ್ಸ್ ತಂಡವು ಅಂಜಿಕೇರಿ ನಾಡು ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.