ವೀರಾಜಪೇಟೆ, ಡಿ. ೧: ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದ ಪ್ರೌಢಶಾಲೆಯ ಹೆಚ್ಚುವರಿ ಕೊಠಡಿ ಹಾಗೂ ಮಹಾದ್ವಾರವನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ಹಿತದೃಷ್ಟಿ ಸರ್ವರು ಶಿಕ್ಷಿತರಾಗಬೇಕು ಎನ್ನುವ ಪರಿಕಲ್ಪನೆ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಸ್ತುತವಾಗಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಕೇಂದ್ರದ ನೀತಿಯನ್ನು ಮೊಟ್ಟಮೊದಲ ಬಾರಿಗೆ ಜಾರಿಗೆ ತರಲು ರಾಜ್ಯ ಸರ್ಕಾರವು ಮುಂದಾಗಿದೆ.
ಶಾಲೆ ಮತ್ತು ಕಾಲೇಜು ಅನುದಾನಗಳಿಗೆ ಸಂಬAಧಿಸಿದ ಮಂಜೂರಾತಿ ಮತ್ತು ಕಟ್ಟಡ ನಿರ್ಮಾಣ ಒಂದೇ ಹಂತದಲ್ಲಿ ಬಿಡುಗಡೆಗೊಳಿಸಿ ಯೋಜನೆಗೆ ಸರ್ಕಾರವು ಮುಂದಾಗಿರುವುದು, ಶಿಕ್ಷಣದ ಬಗ್ಗೆಯಿರುವ ಕಾಳಜಿ ಮತ್ತು ದೂರದೃಷ್ಟಿಯ ಫಲವಾಗಿದೆ. ಸರ್ಕಾರಿ ಯೋಜನೆಗಳಲ್ಲಿ ದಾನಿಗಳು ಸಹಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು. ರಾಜ್ಯ ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ದೊರಕುವ ಎಲ್ಲಾ ಸೌಲಭ್ಯಗಳು ಇಂದು ಸರ್ಕಾರಿ ಶಾಲೆಗಳಲ್ಲಿ ದೊರಕುವಂತಾಗಿದೆ. ದೇಶ ಕಂಡ ವiಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದು ದೇಶದ ಮಹೋನ್ನತ ಪದವಿಗಳನ್ನು ಅಲಂಕರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಗಳು ಎಂದು ಕಡೆಗಣಿಸದೇ ಸರ್ಕಾರದ ವತಿಯಿಂದ ನೀಡಲಾಗುವ ಶಿಕ್ಷಣಕ್ಕೆ ಮಹತ್ವವನ್ನು ನೀಡಿ ಶಿಕ್ಷಣ ಪಡೆಯುವಂತಾಗಬೇಕು ಎಂದು ಹೇಳಿದರು. ಇದೇ ಸಂದರ್ಭ ಮಾಜಿ ಹಾಕಿ ಒಲಂಪಿಯನ್ ಲೆನ್ ಅಯ್ಯಪ್ಪ ಅವರು ನಿರ್ಮಿಸಿರುವ ಡೆಲ್‌ಹೋಪ್ ಡಿಜಿಟಲ್ ಇನ್‌ಕ್ಲುಶನ್ ಸೆಂಟರ್‌ನ್ನು ಶಾಸಕರು ಉದ್ಘಾಟಿಸಿದರು. ಉದ್ಯಮಿ ಪರ್ಲಿ ಆಬ್ರಾಹಂ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸೆಂಟರ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಸಜೇಶ್ ಭರತನ್, ಪೂಜಾ ಸಜೇಶ್, ಶಾಲಾ ಕಟ್ಟಡದ ಗುತ್ತಿಗೆದಾರರು ಹಾಗೂ ವಿದ್ಯಾರ್ಥಿ ಸಂಸ್ಥೆಯಲ್ಲಿ ಓದಿ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿಯ ಅಧ್ಯಕ್ಷ ಶಶಿಕಾಂತ್ ಬಿ.ಆರ್., ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ಆರ್ಜಿ ಗ್ರಾ.ಪಂ. ಉಪಾಧ್ಯಕ್ಷ ಉಪೇಂದ್ರ ಕೆ.ಎನ್. ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ, ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿ ಶ್ರೀಶೈಲ ಬೆಳಗಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ವನಜಾಕ್ಷಿ, ಗಾಯತ್ರಿ, ಗೀತಾಂಜಲಿ, ವೆಂಕಟೇಶ್, ಬೇಟೋಳಿ ಗ್ರಾಮ ಪಂಚಾಯಿತಿ ಪಿ.ಡಿ.ಓ. ಮಣಿ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.